ಬೆಳಗಾವಿ: ಪೊಲೀಸ್ ಠಾಣೆಗೆ ಹೋದ ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಹಿನ್ನಲೆ ಬೆಳಗಾವಿಯಲ್ಲಿ ವಕೀಲರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.
ಬೆಳಗಾವಿಯ ಮಾಳಮಾರುತಿ ಠಾಣೆಯ ಸಿಪಿಐ ವಿರುದ್ಧ ವಕೀಲರ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಎದುರು ರಸ್ತೆ ತಡೆದು ವಕೀಲರ ಧರಣಿ ನಡಿಸಿದ ಕಳೆದ ಮೂರು ಗಂಟೆಗಳ ಕಾಲ ಬೆಳಗಾವಿ ಗೋವಾ ರಸ್ತೆ ಟ್ರಾಫಿಕ್ ಉಂಟಾಗಿ ಸಾರ್ವಜನಿಕರಿಗೆ ಕಿರಿ ಕಿರಿ ಅನುಭವಸುವಂತಾಗಿದೆ.
ಮಾಳಮಾರುತಿ ಸಿಪಿಐ ಸುನಿಲ್ ಕುಮಾರ್ ಪಾಟೀಲ್ ವಿರುದ್ಧ ವಕೀಲರ ಪ್ರತಿಭಟನೆ ನಡೆಸಿ ಪೋಲಿಸರನ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿ ಮಾಳಮಾರುತಿ ಸಿಪಿಐ ಸುನಿಲ್ ಪಾಟೀಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದೆ ವೇಳೆ
ಸ್ಥಳಕ್ಕಾಗಮಿಸಿದ ಡಿಸಿ ಎಂ.ಜಿ.ಹಿರೇಮಠ, ಡಿಸಿಪಿ ವಿಕ್ರಂ ಆಮಟೆ ಪ್ರತಿಭಟನಾನಿರತ ವಕೀಲರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದರೂ ಜಗ್ಗದ ವಕೀಲರು ಸ್ಥಳಕ್ಕೆ ಸಿಪಿಐ ಸುನಿಲ್ ಪಾಟೀಲ್ ಆಗಮಿಸಿ ಕ್ಷಮೆ ಕೋರುವಂತೆ ವಕೀಲರ ಪಟ್ಟು ಹಿಡಿದರು.
PublicNext
05/02/2021 11:24 pm