ಮೈಸೂರು: ಈಗಿನ ತಲೆಮಾರಿನ ಮಕ್ಕಳು ಬಹುಬೇಗ ಬೈಕ್ ಓಡಿಸೋದನ್ನ ಕಲಿತುಬಿಡ್ತಾರೆ. ಲೆಸೆನ್ಸ್ ಇಲ್ಲ ಅಂದ್ರೂ ಗಾಡಿ ಓಡಿಸಿ ಮೋಜು ಮಸ್ತಿ ಮಾಡಲು ಹೋಗಿ ಏನೇನೋ ಅನಾಹುತ ಮಾಡಿಕೊಳ್ತಾರೆ. ಹಾಗಾಗಿ ಅಪ್ರಾಪ್ತರ ಬೈಕ್ ರೈಡ್ಗೆ ಬ್ರೇಕ್ ಹಾಕಲು ಪೊಲೀಸರು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.
ಮೈಸೂರಲ್ಲಿ ಅಪ್ರಾಪ್ತರಿಗೆ ಪೆಟ್ರೋಲ್, ಡೀಸೆಲ್ ಹಾಕಬೇಡಿ ಎಂದು ಪೊಲೀಸರು ಪೆಟ್ರೋಲ್ ಬಂಕ್ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ. ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದರೆ ಮಾಹಿತಿ ನೀಡಿ. ಸಿಸಿಟಿವಿಯಲ್ಲಿ ನೋಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಅಪ್ರಾಪ್ತರು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಬಂದ್ರೆ ಪೊಲೀಸರಿಗೆ ತಕ್ಷಣ ಮಾಹಿತಿ ಹೋಗುತ್ತೆ. ಬಳಿಕ ಅಪ್ರಾಪ್ತರಿಂದ ವಾಹನ ವಶಕ್ಕೆ ಪಡೆಯಲಾಗುತ್ತೆ. ಇಲ್ಲದಿದ್ದರೆ ಸಿಸಿ ಕ್ಯಾಮೆರಾ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬಂಕ್ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ವಾಹನದ ನೊಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ದಾಖಲಾಗುತ್ತೆ. ಈ ವೇಳೆ ಕುಟುಂಬದವರನ್ನು ಕರೆದು ಬುದ್ಧಿವಾದ ಹೇಳಿ ಅರಿವು ಮೂಡಿಸಲಾಗುತ್ತೆ. ಆಗಲೂ ಮಾತು ಕೇಳದಿದ್ದರೆ, ಅವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದು ಮೈಸೂರಿನಲ್ಲಿ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.
PublicNext
05/02/2021 04:24 pm