ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾಂಟ್ ಜಿಪ್‌ ತೆಗೆಯುವುದು ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈ ಕೋರ್ಟ್‌

ಮುಂಬೈ: ಇತ್ತೀಚಿಗಷ್ಟೇ ಚರ್ಮಕ್ಕೆ ಚರ್ಮ ತಾಗದಿದ್ದರೆ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್, ಈಗ ಮತ್ತೊಂದು ವಿವಾದಾತ್ಮಕ ತೀರ್ಪು ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣದ ತೀರ್ಪು ನೀಡುವ ವೇಳೆ, ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ತೀರ್ಪು ನೀಡಿದೆ.

5 ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ಈ ತೀರ್ಪು ನೀಡಿದ್ದಾರೆ. ಈ ಹಿಂದೆ ಇದೇ ಕೋರ್ಟ್‌ ಚರ್ಮ ಚರ್ಮ ತಟ್ಟಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ತೀರ್ಪು ನೀಡಿತ್ತು.

ಆರೋಪಿ ಆಪ್ರಾಪ್ತೆಯ ಪ್ಯಾಂಟ್ ಜಿಪ್‌ ತೆಗೆದು, ಕೈ ಹಿಡಿದುಕೊಂಡಿದ್ದ ಎಂದು ಸಂತ್ರಸ್ತೆಯ ತಾಯಿಯ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯ ಆರೋಪಿಗೆ ಐದು ವರ್ಷಗಳ ಕಠಿಣ ಸಜೆ ಹಾಗೂ 25 ಸಾವಿರ ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್, ಲೈಂಗಿಕ ದೌರ್ಜನ್ಯದಡಿ ದೈಹಿಕ ಸಂಪರ್ಕವಾಗಬೇಕಾದರೇ, ನೇರವಾಗಿ ದೈಹಿಕ ಸಂಪರ್ಕ ಉಂಟಾಗಬೇಕು ಅಥವಾ ಲೈಂಗಿಕ ಸಂಪರ್ಕ ಇಲ್ಲದೇ ಚರ್ಚಕ್ಕೆ ಚರ್ಮ ತಟ್ಟಬೇಕು ಎಂದು ಕೋರ್ಟ್‌ ತೀರ್ಪಿತ್ತಿದೆ. ಅಲ್ಲದೇ ಆರೋಪಿಗೆ ಮೂರು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

Edited By : Vijay Kumar
PublicNext

PublicNext

28/01/2021 09:09 pm

Cinque Terre

48.27 K

Cinque Terre

1

ಸಂಬಂಧಿತ ಸುದ್ದಿ