ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್ ಮಾಡಿದ ಯಾರನ್ನೂ ಶಿಕ್ಷಿಸುವಂತಿಲ್ಲ: ಸುಪ್ರೀಂ

ನವದೆಹಲಿ: ಲವ್ ಮಾಡಿದ ಯಾವುದೇ ಜೋಡಿಯ ಮೇಲೆ ಹಲ್ಲೆ ಮಾಡುವುದು ಗಂಭೀರ ಅಪರಾಧ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಮಾರ್ಚ್ 1991 ರಲ್ಲಿ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಖಾಪ್ ಪಂಚಾಯತ್‌ನ ಒಂದು ಭಾಗದಲ್ಲಿ ನಡೆದ ಪ್ರಕರಣದ ಆರೋಪಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಈ ಮಹತ್ವದ ಆದೇಶವನ್ನು ನೀಡಿದೆ.

ಏನಿದು ಪ್ರಕರಣ?:

ಬೇರೆ ಬೇರೆ ಜಾತಿಯ ಹುಡುಗ ಮತ್ತು ಹುಡುಗಿ ಪ್ರೀತಿಸಿ ಮದುವೆ ಆಗಿದ್ದರು. ಇದಕ್ಕೆ ಮೂವರು ಯುವಕರು ಸಹಕಾರ ನೀಡಿದ್ದರು. ಇದರಿಂದಾಗಿ ಗ್ರಾಮದ ಕೆಲ ಮುಖಂಡರು ಮದುವೆಯಾದ ಯುವಕನ ಕುಟುಂಬಸ್ಥರನ್ನು ಥಳಿಸಿದ್ದರು. ಅಷ್ಟೇ ಅಲ್ಲದೆ ನವ ವಿವಾಹಿತ ಜೋಡಿ ಮತ್ತು ಅವರಿಗೆ ಸಹಕಾರ ನೀಡಿದ ಮೂವರು ಯುವಕರನ್ನು ಗಲ್ಲಿಗೇರಿಸುವಂತೆ ಆದೇಶಿಸಿದ್ದರು. ಈ ಪ್ರಕರಣ ಭಾರೀ ಸಂಚಲ ಮೂಡಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಗ್ರಾಮದ 33 ಮುಖಂಡರನ್ನು ಬಂಧಿಸಿದ್ದರು.

ಈ ಪ್ರಕರಣದ ಸಂಬಂಧ 33 ಜನರಿಗೆ ಮೇ 2016ರಲ್ಲಿ ಅಲಹಾಬಾದ್ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ 11 ಜನ ಆರೋಪಿಗಳು ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪ್ರೀತಿ ಮಾಡಿದ ಯಾರನ್ನೂ ಶಿಕ್ಷಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Edited By : Vijay Kumar
PublicNext

PublicNext

06/01/2021 08:04 pm

Cinque Terre

56.97 K

Cinque Terre

12

ಸಂಬಂಧಿತ ಸುದ್ದಿ