ವಾರಾಣಸಿ: ಕೋರ್ಟ್ ಆದೇಶದಂತೆ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆ ಇಂದು ಸೋಮವಾರ (ಮೇ 16) ಪೂರ್ಣಗೊಂಡಿದೆ. ಮಸೀದಿಯ ಒಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದ್ದು ಶಿವಲಿಂಗದ ರಕ್ಷಣೆ ಕೋರಿ ಸಿವಿಲ್ ನ್ಯಾಯಾಲಯಕ್ಕೆ ಹೋಗುವುದಾಗಿ ವಕೀಲ ವಿಷ್ಣು ಜೈನ್ ಹೇಳಿದ್ದಾರೆ.
ನಂದಿ ಕಡೆ ಮುಖ ಮಾಡಿರುವ ಶಿವಲಿಂಗ ಇದಾಗಿದ್ದು, 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ ಭಾರೀ ಭದ್ರತೆ ನಡುವೆ ನಡೆದ ಸಮೀಕ್ಷೆಯ ವರದಿಯನ್ನು ಅಡ್ವೊಕೇಟ್ ಕಮೀಷನರ್ ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಜ್ಞಾನವಾಪಿ ಸಂಕೀರ್ಣದ ಪಶ್ಚಿಮ ಗೋಡೆಯ ಮೇಲೆ ಹಿಂದೂ ದೇವಾಲಯದ ಅವಶೇಷಗಳು ಗೋಚರಿಸಿತ್ತು. ಇದಕ್ಕಾಗಿ ಸೋಮವಾರ ನಾಲ್ಕನೇ ಬೀಗ ತೆರೆಯಲಾಗಿತ್ತು. ಶನಿವಾರ ನಡೆದ ಸಮೀಕ್ಷೆ ವೇಳೆ ಮೊದಲ ಮೂರು ಕೊಠಡಿ ತೆರೆಯಲಾಗಿತ್ತು.
PublicNext
16/05/2022 03:24 pm