ಮಂಡ್ಯ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಕೋವಿಡ್ ಕಾರಣ ಕಳೆದೆರಡು ವರ್ಷದಿಂದ ನಿಂತೇ ಹೋಗಿತ್ತು. ಆದರೆ ಇನ್ನು ಎಲ್ಲವೂ ಸರಿ ಹೋಗಿಯೇ ಬಿಟ್ಟಿದೆ. ಬ್ರಹ್ಮೋತ್ಸವ ಶುರು ಮಾಡೋಣ ಅಂತ ಮುಂದೇ ಬಂದ್ರೆ ಆರಂಭದಲ್ಲಿಯೇ ವಿಘ್ನ ಬಂದಿದೆ. ಬನ್ನಿ, ನೋಡೋಣ.
ವೈರಮುಡಿ ಬ್ರಹ್ಮೋತ್ಸವ ಈ ಭಾಗದಲ್ಲಿ ತುಂಬಾ ವಿಶೇಷವಾಗಿಯೇ ನೆರವೇರುತ್ತದೆ. ಈ ಸಲವೂ ಅದೇ ರೀತಿ ನಡೆಯುತ್ತದೆ ಅಂತಲೇ ಭಾವಿಸಲಾಗಿತ್ತು. ಆದರೆ ವಜ್ರ ಖಚಿತ ವೈರಮುಡಿ ಕಿರೀಟ ತರುವ ವಿಚಾರದಲ್ಲಿಯೇ ದೇವಸ್ಥಾನದ ಅರ್ಚಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿದೆ.
ಪ್ರತಿ ವರ್ಷ ದೇಗುಲದ ಒಂದೇನೆ ಇಲ್ಲವೇ ನಾಲ್ಕನೆ ಸ್ಥಾನಿಕರು ಕಿರೀಟ ತರಲು ವಾಹನದೊಂದಿಗೆ ಖಜಾನೆ ಬಳಿ ಬರಬೇಕು.ಆದರೆ ಕಿರೀಟವನ್ನ ಯಾರು ತರಬೇಕು ಅನ್ನೋದನ್ನ ಅಧಿಕಾರಿಗಳು ಸರಿಯಾಗಿಯೇ ತಿಳಿಸಿಲ್ಲ. ಹೀಗಾಗಿ ಸ್ಥಾನೀಕರು ಮತ್ತು ಅಧಿಕಾರಿಗಳ ನುಡುವೆ ಜಟಾಪಟಿ ಆಗಿದೆ. ಪೊಲೀಸರು ಮಧ್ಯೆ ಪ್ರವೇಶಿಸಿ ಈ ಕಿತ್ತಾಟಕ್ಕೆ ಒಂದು ಅಂತ್ಯ ಹಾಡಿದ್ದಾರೆ. ಪಾಂಟವಪುರ ತಹಶೀಲ್ದಾರ ಪ್ರಮೋದ್ ಪಾಟೀಲ್ ನೇತೃತ್ವದಲ್ಲಿಯೇ ಸದ್ಯಕ್ಕೆ ಈ ಜಟಾಪಟಿಕೆ ಎಂಡ್ ಆಗಿದೆ.
PublicNext
14/03/2022 11:41 am