ಚಿಕ್ಕೋಡಿ: ಗಡಿನಾಡು ಶಕ್ತಿದೇವತೆ ಶ್ರೀ ಮಾಯಕ್ಕಾದೇವಿಯ ದೇವಾಲಯ ಕೊರೋನಾ ಹಿನ್ನೆಲೆ ಹದಿನೆಂಟು ತಿಂಗಳಿಂದ ಬಂದ ಆಗಿದ್ರಿಂದ ದೇವಸ್ಥಾನ ಪೂಜಾ ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಸಂಕಷ್ಟಕ್ಕೆ ಎದುರಿಸುವಂತಾಗಿದೆ.
ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ಧ ದೇವಸ್ಥಾನ ಚಿಂಚಲಿ ಮಾಯಾಕ್ಕಾ ದೇವಸ್ಥಾನದಲ್ಲಿ ಸದ್ಯ ಕೋರೋನಾ ಹಿನ್ನೆಲೆಯಲ್ಲಿ ಸರ್ಕಾರದ ಕೊರೋನಾ ಮಾರ್ಗಸೂಚಿ ಪ್ರಕಾರ ಕಳೆದ ಹದಿನೆಂಟು ತಿಂಗಳಿಂದ ದೇವಾಲಯ ಬಂದ ಆಗಿದ್ರಿಂದ ಅಪಾರ ಪ್ರಮಾಣದ ಭಕ್ತರಿಗೆ ದರ್ಶನ ಭಾಗ್ಯ ಇಲ್ಲದೆ ಕೆಲವರು ದೇವಾಲಯದ ಹೊರಗಡೆ ದ್ವಾರ ಬಾಗಿಲಿಗೆ ನಮಸ್ಕರಿಸಿ ಹೊಗುತಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಗೋವಾ ಮೊದಲಾದ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತಿದ್ದರು, ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ, ದೇವಸ್ಥಾನ ಒಳಗೆ ಯಾರಿಗೂ ಪ್ರವೇಶವಿಲ್ಲ, ದೇವರಿಗೆ ದಿನನಿತ್ಯ ಪೂಜಾ ಕೈಂಕರ್ಯಗಳು ನಡೆಸಲಾಗುತ್ತಿದೆ. ಬೆರಳೆಣಿಕೆಯಷ್ಟು ಬಂದ ಭಕ್ತಾದಿಗಳು ದೇವಸ್ಥಾನ ದ್ವಾರ ಬಾಗಿಲಿಗೆ ನಮಸ್ಕರಿಸಿ ಹಿಂದಿರುಗುತ್ತಿದ್ದಾರೆ.
ಸದ್ಯ ಶ್ರಾವಣ ಮಾಸ ದಿನನಿತ್ಯ ಲಕ್ಷಾಂತರ ಭಕ್ತರ ಆಗಮನ ಆಗುತಿತ್ತೂ ಆದರೆ ದೇವಿಯ ದರ್ಶನಕ್ಕೆ ಸರ್ಕಾರ ನಿರ್ಬಂಧ ಹೇರಲಾಗಿದೆ. ಪರಿಣಾಮ ವ್ಯಾಪಾರ ನಂಬಿದ ವ್ಯಾಪಾರಸ್ಥರು ಜೀವನ ನಡೆಸುವುದು ತೊಂದರೆ ಉಂಟಾಗಿದೆ, ಸರ್ಕಾರ ದೇವಸ್ಥಾನ ತೆರೆಯುವಂತೆ ಆದೇಶ ಮಾಡಬೇಕು ಇಲ್ಲವಾದರೆ ನಮಗೆ ಸೂಕ್ತ ಪರಿಹಾರ ನಿಡುವಂತೆ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.
PublicNext
29/08/2021 06:52 pm