ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ವ್ಯಸನಿ ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಪಾಠ ಕಲಿಸಿದ ತಾಯಿ: ವಿಡಿಯೋ ವೈರಲ್

ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ ಮಗನನ್ನು ಕಂಬಕ್ಕೆ ಕಟ್ಟಿದ ತಾಯಿ ಮುಖಕ್ಕೆ ಖಾರದ ಪುಡಿ ಎರಚಿ ಹಿಗ್ಗಾ-ಮುಗ್ಗಾ ಥಳಿಸಿದ್ದಾಳೆ.

ಹೈದರಾಬಾದ್‌ನ ಸೂರ್ಯಪೇಟೆಯಲ್ಲಿ ಈ ಘಟನೆ‌ ನಡೆದಿದೆ ಎನ್ನಲಾಗಿದೆ. ತನ್ನ 15 ವರ್ಷದ ಮಗ ಸುಮಾರು ದಿನಗಳಿಂದ ಗಾಂಜಾ ಸೇವಿಸುತ್ತಿರುವುದು ಗೊತ್ತಾದ ತಾಯಿ ಬುದ್ಧಿ ಹೇಳಿದ್ದಾರೆ. ಅಮ್ಮ ಹೇಳಿದ ಬುದ್ಧಿಮಾತಿಗೆ ಬಗ್ಗದ ಮಗ ಮತ್ತೆ ತನ್ನ ಚಟ ಮುಂದುವರೆಸಿದ್ದಾನೆ‌ ಎನ್ನಲಾಗಿದೆ‌. ಇದರಿಂದ ಕೆಂಡಾಮಂಡಲಳಾದ ತಾಯಿ, ಚಟಕ್ಕೆ ದಾಸನಾದ ಮಗನನ್ನು ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ್ದಾಳೆ. ನಂತರ ಆತ ಕಿರುಚಾಡಿ ಗಾಂಜಾ ಸೇವನೆ ನಿಲ್ಲಿಸೋದಾಗಿ ಭರವಸೆ ನೀಡಿದ ನಂತರ ಬಿಡಲಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Edited By :
PublicNext

PublicNext

05/04/2022 03:35 pm

Cinque Terre

64.02 K

Cinque Terre

39