ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವೆಂದರೆ ಒಂದು ಗೌರವ ಯೋಗಿಯವರ ಸರಳತೆ, ಕೈಗೊಳ್ಳುವ ಯೋಜನೆ, ನಡೆದುಕೊಳ್ಳುವ ರೀತಿ ನಿಜಕ್ಕೂ ಇತರರಿಗೆ ಮಾದರಿ ಎಂದರೆ ಅತಿಶಯೋಕ್ತಿಯಾಗಲಾರದು.
ಯೋಗಿಯವರ ಭಾಷಣಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮುಖ್ಯವಾಗಿ ಮಾನವೀಯತೆಗೆ ಹೆಚ್ಚಿನ ಆದ್ಯತೆ ನೀಡುವುದೇ ಅನೇಕರ ಇಷ್ಟವಾಗುತ್ತದೆ.
ಇಂತಹವರ ರಾಜ್ಯದಲ್ಲೇ ಎಲ್ಲರೂ ತಲೆ ತಗ್ಗಿಸುವಂತ ಘಟನೆಗಳು ನಡೆಯುತ್ತಲೇ ಇವೆ ಸಧ್ಯ ಯುಪಿಯಲ್ಲಿ ನಡೆದಿರುವ ಘಟನೆ ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ. ಹೌದು ಯುಪಿ ಪೊಲೀಸರೊಬ್ಬರು ನಡೆದುಕೊಂಡಿರುವ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಅಷ್ಟಕ್ಕೂ ಆ ಪೊಲೀಸಪ್ಪ ಮಾಡಿದ್ದಾದರೂ ಏನು ಅಂತಿರಾ ಇಲ್ಲಿದೆ ನೋಡಿ ಕಂಪ್ಲಿಟ್ ಕಹಾನಿ.. ನೋಡಿ ಈ ವಿಡಿಯೋನೊಮ್ಮೆ ನೋಡಿ ಪೊಲೀಸಪ್ಪ ಒಬ್ಬ ವಿಕಲಚೇತನನನ್ನು ನಡೆಸಿಕೊಂಡ ಪರಿ.
ಯಾವ ರಾಜ್ಯದಲ್ಲಿ ನಿತ್ಯ ದಯೆ ಕರುಣೆ ಬಗ್ಗೆ ಹಿತ ನುಡಿಗಳು ಕೇಳುತ್ತಿದ್ದವೊ ಅದೇ ರಾಜ್ಯದ ಮತ್ತೊಂದು ಕರಾಳ ಮುಖವಿದು ಎಂದು ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.
ಒಬ್ಬ ವಿಕಲಚೇತನ ಅಂತಾದರೂ ಕರುಣೆ ಬೇಡವೇ ಎಂದು ಟ್ವೀಟಿಗರು ಸಕ್ಕತ್ ಗರಂ ಆಗಿದ್ದಾರೆ. ಒಂದೇ ಕಾಲಿನಲ್ಲಿ ನಡೆಯಲು ಹೆಣಗಾಡುತ್ತಿರುವ ವ್ಯಕ್ತಿಯನ್ನು ತಳ್ಳಿ ಮಾನವೀಯತೆಯನ್ನೇ ಮರೆತ್ತಿದ್ದಾನೆ ಈ ಪೊಲೀಸಪ್ಪ.
ಇದು ಒಬ್ಬ ವಿಕಲಚೇತನಿಗೆ ಕೊಟ್ಟ ಪೆಟ್ಟಲ್ಲಾ ಬದಲಾಗಿ ಮಾನವೀಯತೆಗೆ ಕೊಟ್ಟ ಪಟ್ಟು ಯುಪಿ ಪೊಲೀಸರ ಈ ಅಮಾನವೀಯರ ಕೃತ್ಯಕ್ಕೆ ಯುಪಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದುನೋಡಬೇಕಿದೆ.
PublicNext
18/09/2020 09:54 pm