ನ್ಯೂಯಾರ್ಕ್ : ರಸ್ತೆಗಳನ್ನು ಸುರಕ್ಷಿತಗೊಳಿಸಲು ನ್ಯೂಯಾರ್ಕ್ ನಗರದ ಮೇಯರ್ ನೂರಾರು ಅಕ್ರಮ ಬೈಕ್ ಗಳನ್ನು ಬುಲ್ಡೋಜರ್ ಸಹಾಯದಿಂದ ನಾಶಗೊಳಿಸದ್ದಾರೆ.ಸಾಮಾನ್ಯ ಬೈಕ್ ಗಳಿಗಿಂತ ಭಿನ್ನವಾದ, ಕಡಿಮೆ ತೂಕದ, ಕಚ್ಚಾ ರಸ್ತೆ, ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸಲು ಮಾತ್ರ ಯೋಗ್ಯವಾದ, ನಗರಪ್ರದೇಶಗಳಲ್ಲಿ ಇತರ ವಾಹನ ಸವಾರರಿಗೆ ತೊಂದರೆ ಉಂಟು ಮಾಡುವಂತಹ ನೂರಕ್ಕೂ ಹೆಚ್ಚು ಬೈಕ್ ಗಳು ಬುಲ್ಡೋಜರ್ ಅಡಿ ಪುಡಿಪುಡಿಯಾಗಿವೆ.
ಹೌದು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರು ನಗರದಲ್ಲಿ ನೂರಾರು ಅಕ್ರಮ ಮತ್ತು ಅಪಾಯಕಾರಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ನಾಶಪಡಿಸುವ ಮೂಲಕ ಅಕ್ರಮ ವಾಹನಗಳನ್ನು ಹೊಂದಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಈ ಬೈಕ್ ಗಳನ್ನು ನಾಶಪಡಿಸುವ ವಿಡಿಯೋವನ್ನು ಟ್ವೀಟ್ ಮಾಡಿದ ಮೇಯರ್ ಕಚೇರಿ "ನೀವು ನಮ್ಮ ನೆರೆಹೊರೆಯವರನ್ನು ಭಯಭೀತಗೊಳಿಸಲು ಬಯಸುವಿರಾ?" ಹಾಗಿದ್ದರೆ "ನೀವು ಪುಡಿಪುಡಿಯಾಗುತ್ತೀರಿ." ಎಂದು ವೀಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.
PublicNext
24/06/2022 09:04 am