ಉಕ್ರೇನ್: ತನ್ನ ನೆರೆಹೊರೆಯ ರಾಷ್ಟ್ರ ಉಕ್ರೇನ್ ಮೇಲೆ ಕಣ್ಣಿಟ್ಟಿದ್ದ ರಷ್ಯಾ ಈಗಾಗಲೇ ಆ ದೇಶದ ಮೇಲೆ ದಾಳಿ ಮಾಡಿದೆ. ಉಕ್ರೇನ್‌ನಲ್ಲಿನ ಧಾನ್ಯ ಹಾಗೂ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ರಷ್ಯಾ ಹವಣಿಸುತ್ತಿದೆ. ಈ ಉದ್ದೇಶಕ್ಕಾಗಿಯೇ ರಷ್ಯಾ ಉಕ್ರೇನ್ ಮೇಲೆ ಸಮರ ಸಾರಿದ್ದು ಇದಕ್ಕೆ ಪ್ರತಿಯಾಗಿ ಉಕ್ರೇನ್ ಅಧ್ಯಕ್ಷ ವೋಲ್ದಿಮಿರ್ ಝೆಲ್ಯಂಸ್ಕಿ ಸೆಡ್ಡು ಹೊಡೆದು ನಿಂತಿದ್ದಾರೆ. ತಮ್ಮ ಪರವಾಗಿ ಹೋರಾಡಲು ಬರುವ ಇತರ ರಾಷ್ಟ್ರಗಳಿಗೆ ತಮ್ಮ ಬಳಿಯ ಎಲ್ಲ ಶಸ್ತ್ರಾಸ್ತ್ರಗಳನ್ನು ನೀಡೋದಾಗಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಜಾಗತಿಕ ನಾಯಕರು ಇದು ಮೂರನೇ ಮಹಾಯುದ್ಧಕ್ಕೆ ಕಾರಣ ಆಗಬಹುದೇ ಎಂಬ ಬಗ್ಗೆ ಆತಂಕಗೊಂಡಿದ್ದಾರೆ.
ಸದ್ಯ ರಷ್ಯಾ ಹಾಗೂ ಉಕ್ರೇನ್ ನಡುವೆ ರಣರಂಗದ ಕಾದಾಟ ನಡೆದಿದೆ. ಇಲ್ಲಿಯವರೆಗೆ ಸುಮಾರು ಒಂದು ಲಕ್ಷ ರಷ್ಯನ್ ಯೋಧರು ಉಕ್ರೇನ್ ಗಡಿಯನ್ನು ಸುತ್ತುವರೆದಿದ್ದಾರೆ. ಉಕ್ರೇನ್ ದೇಶದ ನಗರಗಳಾದ ಕೀವ್ ಹಾಗೂ ಕಾರ್‌ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಇದರ ಪರಿಣಾಮ 9 ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ. ದಾಳಿ ಪರಿಣಾಮ ಉಕ್ರೇನ್ ನಾಗರಿಕರು ಪ್ರಾಣಭೀತಿಯಲ್ಲಿದ್ದಾರೆ.
ಇನ್ನು ಉಭಯ ದೇಶಗಳ ಸೇನಾ ಬಲಾಬಲ ನೋಡೋದಾದ್ರೆ..
* ರಷ್ಯಾದ ಎಲ್ಲ ಸೇನಾ ವಿಭಾಗದಲ್ಲಿ 8 ಲಕ್ಷ 50 ಸಾವಿರ ಸೈನಿಕರಿದ್ದಾರೆ. ಉಕ್ರೇನ್ ಕೇವಲ 2 ಲಕ್ಷ 50 ಸಾವಿರ ಸಕ್ರಿಯ ಸೇನಾನಿಗಳನ್ನು ಒಳಗೊಂಡಿದೆ.
* ಇನ್ನು ರಷ್ಯಾ 30,000ಕ್ಕೂ ಅಧಿಕ ಸಶಸ್ತ್ರ ವಾಹನಗಳನ್ನು ರಷ್ಯಾ ಹೊಂದಿದೆ. ಉಕ್ರೇನ್ 12,000 ಸಶಸ್ತ್ರ ವಾಹನಗಳನ್ನು ಹೊಂದಿದೆ.
* 12,500 ಸೇನಾ ಟ್ಯಾಂಕ್‌ಗಳು ರಷ್ಯಾ ಬಳಿ ಇದ್ದರೇ, ಉಕ್ರೇನ್ 2,600 ಸೇನಾ ಟ್ಯಾಂಕ್‌ಗಳನ್ನು ಹೊಂದಿದೆ.
*ಉಕ್ರೇನ್ ಬಳಿ ಕೇವಲ 3,000 ಫಿರಂಗಿಗಳಿದ್ದರೆ ರಷ್ಯಾ ಬಳಿ 14,000 ಕ್ಕೂ ಅಧಿಕ ಫಿರಂಗಿಗಳಿವೆ.
*ಉಳಿದಂತೆ 600ಕ್ಕೂ ಅಧಿಕ ಬೃಹತ್ ನೌಕಾ ವಾಹನಗಳನ್ನು ರಷ್ಯಾ ಹೊಂದಿದ್ದರೆ ಕೇವಲ 30 ಬೃಹತ್ ನೌಕಾ ವಾಹನಗಳನ್ನು ಉಕ್ರೇನ್ ಹೊಂದಿದೆ.
ಉಕ್ರೇನ್ ಹಾಗೂ ರಷ್ಯಾ ನಡುವಿನ ಸೇನಾ ಸಾಮರ್ಥ್ಯಕ್ಕೆ ಅಜಗಜಾಂತರ ವ್ಯತ್ಯಾಸ ಇದ್ದರೂ ಸದ್ಯ ರಷ್ಯಾ ವಿರುದ್ಧ ತೊಡೆ ತಟ್ಟಿರುವ ಉಕ್ರೇನ್ 'ಬಂದಿದ್ದೆಲ್ಲ ಬರಲಿ' ಎಂಬಂತೆ ದಾಳಿಗೆ ಪ್ರತಿದಾಳಿ ಕೊಡುತ್ತಲೇ ಇದೆ.
PublicNext
24/02/2022 06:04 pm