ಇಸ್ಲಾಮಾಬಾದ್: ಕೊರೊನಾ ವೈರಸ್‌ನಿಂದ ಇಡೀ ವಿಶ್ವವನ್ನೇ ತತ್ತರಿಸಿ ಹೋಗಿದೆ. ಹೀಗಿದ್ದರೂ ಪಾಕಿಸ್ತಾನದ ವ್ಯಕ್ತಿಯೊಬ್ಬ ಇದೊಂದು ಶುದ್ಧ ಸುಳ್ಳು, ಲಸಿಕೆ ಖರೀದಿಸಬೇಡಿ ಎಂದು ಮನವಿ ಸಲ್ಲಿಸಿ 92 ಸಾವಿರ ರೂ. ದಂಡಕ್ಕೆ ಗುರಿಯಾಗಿದ್ದಾನೆ.
ಏರ್ ಕಂಡಿಷನರ್ ಮೆಕ್ಯಾನಿಕ್ ಆಗಿರುವ ವ್ಯಕ್ತಿಯೊಬ್ಬ, 'ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಅಸ್ತಿತ್ವದಲ್ಲಿಲ್ಲ. ಕೊರೊನಾ ವೈರಸ್ ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿದೆ. ಹೀಗಾಗಿ ಸರ್ಕಾರ ಲಸಿಕೆ ಖರೀದಿಸುವುದನ್ನು ತಡೆಯಬೇಕು' ಎಂದು ಲಾಹೋರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ವ್ಯಕ್ತಿಯ ಅರ್ಜಿಯನ್ನು ವಜಾಗೊಳಿಸಿದೆ. ಅಷ್ಟೇ ಅಲ್ಲದೆ ಕೋರ್ಟ್ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ದಂಡದ ಬಿಸಿ ಮುಟ್ಟಿಸಿದೆ.
PublicNext
24/12/2020 07:54 pm