ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಕಾರ್ಮಿಕ ನೀತಿ ಜಾರಿಗೆ ಕೇಂದ್ರ ಸಿದ್ಧತೆ: 15 ನಿಮಿಷ ಅಧಿಕಾವಧಿ ಕೆಲಸಕ್ಕೂ 'ಓಟಿ'?

ನವದೆಹಲಿ: ಪರಿಷ್ಕೃತ ನಿಯಮಗಳೊಂದಿಗೆ ರೂಪುಗೊಳ್ಳುತ್ತಿರುವ ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಹೊಸ ಕಾರ್ಮಿಕ ನೀತಿಯು ಕಾರ್ಮಿಕ ವಲಯದಲ್ಲಿ ಹಲವು ಬದಲಾವಣೆ ಹಾಗೂ ಅನೇಕ ಸೌಕರ್ಯಗಳು ದೊರೆಯಲಿವೆ ತರುವ ಭರವಸೆ ನೀಡಿದೆ. ಈ ಮೂಲಕ ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೆ ಅದನ್ನು ಅಧಿಕಾವಧಿ (ಓಟಿ) ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಆ ನೌಕರ ಓಟಿ ವೇತನ ಪಡೆಯಲು ಅರ್ಹ ಎನ್ನಲಾಗಿದೆ.

ಕೇಂದ್ರ ಜಾರಿಗೆ ತರಲು ಮುಂದಾಗಿರುವ ಹೊಸ ಕಾರ್ಮಿಕ ನೀತಿಯ ಪ್ರಕಾರ ಕಂಪನಿಗಳು ತಮ್ಮ ನೌಕರರಿಗೆ ಪಿಎಫ್ ಹಾಗೂ ಇಎಸ್ ಐ ಸೌಲಭ್ಯ ಒದಗಿಸುವುದನ್ನು ಖಚಿತಪಡಿಸಬೇಕಾಗಿದೆ. ಯಾವುದೇ ಕಂಪನಿಯು ಗುತ್ತಿಗೆದಾರ ಅಥವಾ ಮೂರನೇ ವ್ಯಕ್ತಿಯ ಮೂಲಕ ಬಂದಿದೆ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Edited By : Vijay Kumar
PublicNext

PublicNext

15/02/2021 07:53 pm

Cinque Terre

71.49 K

Cinque Terre

5

ಸಂಬಂಧಿತ ಸುದ್ದಿ