ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಗಳು ಡಿಬಾರ್

ಭೋಪಾಲ್ (ಮಧ್ಯಪ್ರದೇಶ) : ಕೆಲವು ಸಂದರ್ಭಗಳಲ್ಲಿ ಬರುವ ಸಮಸ್ಯೆಗಳಿಗೆ ಬಾರೀ ಬೆಲೆ ತೆರಬೇಕಾಗುತ್ತದೆ. ಸದ್ಯ ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್ ಸಿ) ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಒಂದು ಪ್ರಶ್ನೆಯಿಂದ ಪ್ರಶ್ನೆ ಪತ್ರಿಕೆ ತಯಾರು ಮಾಡಿರುವ ಅಧಿಕಾರಿಗಳು ಡಿಬಾರ್ ಆಗಿದ್ದಾರೆ.

ಮಧ್ಯಪ್ರದೇಶ ಲೋಕಸೇವಾ ಆಯೋಗದ ರಾಜ್ಯ ಸೇವೆ ಮತ್ತು ಅರಣ್ಯ ಸೇವೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿ, ಇಬ್ಬರು ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದಾರೆ. ಬೇರೆಲ್ಲೂ ಕೆಲಸ ನೀಡದಂತೆಯೂ ಎಂಪಿಪಿಎಸ್ ಸಿ ಆದೇಶಿಸಿದೆ!

ಪ್ರಶ್ನೆ: ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಭಾರತ ನಿರ್ಧರಿಸಬೇಕೆ?

ಆಯ್ಕೆ 1: ಹೌದು, ಇದು ಭಾರತಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತದೆ.

ಆಯ್ಕೆ 2: ಇಲ್ಲ, ಅಂತಹ ನಿರ್ಧಾರವು ಇದೇ ರೀತಿಯ ಬೇಡಿಕೆಗಳ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.

ನಾಲ್ಕು ಉತ್ತರ ಆಯ್ಕೆಗಳೆಂದರೆ

(ಎ) ಆಯ್ಕೆ 1 ಬಲವಾಗಿದೆ

(ಬಿ) ಆಯ್ಕೆ 2 ಪ್ರಬಲವಾಗಿದೆ

(ಸಿ) ಆಯ್ಕೆ 1 ಮತ್ತು 2 ಎರಡೂ ಪ್ರಬಲವಾಗಿವೆ

(ಡಿ) ಆಯ್ಕೆ 1 ಮತ್ತು 2 ಎರಡೂ ಪ್ರಬಲವಾಗಿಲ್ಲ.

ಈ ಪ್ರಶ್ನೆ ಭಾರಿ ವಿವಾದ ಹುಟ್ಟುಹಾಕಿದ್ದೂ ಅಲ್ಲದೇ ಪೇಪರ್ ರೆಡಿ ಮಾಡಿದ ಇಬ್ಬರು ಅಧಿಕಾರಿಗಳನ್ನು ಡಿಬಾರ್ ಮಾಡಲಾಯಿತು. ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇವರೇ ಸಿದ್ಧಪಡಿಸುವುದರಿಂದ ಅವರನ್ನು ಪಿಎಸ್ ಸಿ ಡಿಬಾರ್ ಮಾಡಿದೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

24/06/2022 02:48 pm

Cinque Terre

22.56 K

Cinque Terre

0

ಸಂಬಂಧಿತ ಸುದ್ದಿ