ವಿಜಯಪುರ: ವಿಜಯಪುರದಲ್ಲಿ ಹಿಜಾಬ್ ಗದ್ದಲ ಮತ್ತೆ ಮುಂದುವರೆದಿದೆ. ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ. ವಿಜಯಪುರ ನಗರದ ಗಾಂಧಿ ಚೌಕ್ ಬಳಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಪಸ್ ಮನೆಗೆ ತೆರಳಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಸಾನಿಯಾ ಇನಾಮ್‌ದಾರ್, ನಮಗೆ ಹಿಜಾಬ್ ಮುಖ್ಯ, ಮುಂದಿನ ಪೀಳಿಗೆಗೆ ಇದು ಬೇಕು. ಪ್ರತ್ಯೇಕ ಕೊಠಡಿ ಮಾಡಿದ್ದಾರೆ, ನಾವು ಹಿಜಾಬ್ ತೆಗೆದು ಕ್ಲಾಸ್‌ಗೆ ಬೇಕಂತೆ. ಆದ್ರೆ ನಾವು ಹೋಗಲ್ಲ ಎಂದಿದ್ದಾರೆ.
PublicNext
17/02/2022 04:05 pm