ನವದೆಹಲಿ : ಬಂತಿಂಡಾದ ಬಹದೂರ್ ಗಡ ಜಾಂಡಿಯನ್ ಗ್ರಾಮದ ನಿವಾಸಿ 73 ವರ್ಷದ ಮೊಹಿಂದರ್ ಕೌರ್ ಅವರ ಫೋಟೊವನ್ನು ಹಾಕಿದ್ದ ಕಂಗನಾ, ಶಹೀನ್ ಬಾಗ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅದೇ 'ದೀದಿ' ರೈತರ ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಸದ್ಯ ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೃದ್ಧ ರೈತ ಮಹಿಳೆಯನ್ನು ತಪ್ಪಾಗಿ ಗುರುತಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಪಂಜಾಬ್ ನ ಜಿರಾಕ್ಪುರದ ವಕೀಲರೊಬ್ಬರು ಲೀಗಲ್ ನೋಟಿಸ್ ನೀಡಿದ್ದಾರೆ.
ಏಳು ದಿನಗಳ ಒಳಗೆ ಕ್ಷಮಾಪಣೆ ಕೋರಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ. 100 ರೂ ಹಣಕ್ಕೆ ಅವರು ಪ್ರತಿಭಟನೆಗಳಿಗೆ ಸಿಗಲಿದ್ದಾರೆ ಎಂದು ಆರೋಪಿಸಿದ್ದರು.
ಸುಳ್ಳು ಸುದ್ದಿಯನ್ನು ಹರಡಿದ್ದಕ್ಕೆ ಕಂಗನಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಬಳಿಕ ನಟಿ ಟ್ವೀಟ್ ಡಿಲೀಟ್ ಮಾಡಿದ್ದರು. ಮೊಹಿಂದರ್ ಕೌರ್ ಅವರೂ ಕಂಗನಾ ತಮ್ಮ ವಿರುದ್ಧ ಹೀಗೆ ಟ್ವೀಟ್ ಮಾಡಿದಕ್ಕೆ ಕಿಡಿಕಾರಿದ್ದರು.
PublicNext
02/12/2020 07:55 pm