ಗದಗ: ಸರ್ಕಾರ ಕೊರೋನಾ ಮೂರನೇ ಅಲೆಯ ಬಗ್ಗೆ ಕಠಿಣ ಕ್ರಮ ಜಾರಿ ಮಾಡಿದರೂ ಕೂಡ ಶಾಸಕರೊಬ್ಬರು ಮಾತ್ರ ಕೊರೋನಾ ನಿಯಮ ಪಾಲನೆ ಮಾಡದೆ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಹೌದು..ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರು ಕೋವಿಡ್ ನಿಯಮ ಗಾಳಿಗೆ ತೂರಿ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಜನ್ಮ ದಿನ ಆರಚಣೆ ಮಾಡಿಕೊಂಡಿದ್ದು,
ಸಾರ್ವಜನಿಕರಿಗೆ ಒಂದು ರೂಲ್ಸ್... ಜನಪ್ರತಿನಿಧಿಗಳಿಗೆ ಒಂದು ರೂಲ್ಸ್...? ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಇನ್ನೂ ಮೂರನೇ ಅಲೆಯ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಗಡಿ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಹಾಗೂ ಅಂತರರಾಜ್ಯ ಪ್ರಯಾಣಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹಾಕಲಾಗಿದೆ. ಆದರೆ ಶಾಸಕ ರಾಮಣ್ಣ ಲಮಾಣಿ ಈ ನಡೆಯ ವಿರುದ್ಧ ಪ್ರಜ್ಞಾವಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
15/08/2021 04:31 pm