ಬೆಂಗಳೂರು: ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದ ವಕೀಲರೊಬ್ಬರು ಈಗ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೇನೆ ಚೆನ್ನೈ ಮೂಲದ ವಕೀಲ ಆರ್.ಸುಬ್ರಹ್ಮಣ್ಯಂ ಸಾರ್ವಜನಿಕವಾಗಿಯೇ ಕ್ಷಮೆಯಾಚಿಸಿದ್ದಾರೆ. ಇನ್ಮುಂದೆ ಸ್ವತಃ ಯಾವುದೇ ಪ್ರಕರಣವನ್ನ ದಾಖಲಿಸೋದಿಲ್ಲ. ಬೇರೆಯವರಿಗೂ ಮೊಕದ್ದಮೆ ದಾಖಲಿಸಲು ನೆರವಾಗೋದಿಲ್ಲ ಅಂತಲೇ ಹೇಳಿದ್ದಾರೆ.
ವಕೀಲ ಸುಬ್ರಹ್ಮಣ್ಯಂ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ವಿರುದ್ಧ 45000 ಕೋಟಿ ರೂಪಾಯಿ ಅಕ್ರಮ ಎಸಗಿರೋ ಆರೋಪವನ್ನ ಮಾಡಿದ್ದರು.
PublicNext
05/05/2022 06:43 pm