ನವದೆಹಲಿ: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಆರೋಪಿ ವಿವೇಕ್ ಅವರ ಪತ್ನಿಯ ಸಹೋದರ ಆದಿತ್ಯ ಆಳ್ವಾ ಬಂಧನಕ್ಕೆ ಮುನ್ನವೇ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆದಿತ್ಯ ಆಳ್ವಾ ಅವರನ್ನು ಹುಡುಕಿಕೊಂಡು ಸಿಸಿಬಿ ತಂಡ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ನಿವಾಸಕ್ಕೆ ತೆರಳಿತ್ತು. ಈ ನಂತರ ಆಳ್ವಾ ಪೊಲೀಸರಿಂದ ತಪ್ಪಿಸಿಕೊಂಡಿದ್ದಲ್ಲದೆ ಬಂಧನಕ್ಕೆ ಮುನ್ನವೇ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಆಳ್ವಾ ಮೊದಲು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.
PublicNext
17/12/2020 03:29 pm