ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಟಿಆರ್‌ಪಿ ಕೇಸ್: ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್‌ಗೆ ಜಾಮೀನು

ಮುಂಬೈ: ನಕಲಿ ಟಿಆರ್‌ಪಿ ರೇಟಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಕಂಚಂದಾನಿ ಅವರಿಗೆ ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಇಂದು ಜಾಮೀನು ನೀಡಿದ್ದಾರೆ.

ಈ ಪ್ರಕರಣದ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ 14 ದಿನಗಳ ಕಾಲ ವಿಕಾಸ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಹೀಗಾಗಿ ಜಾಮೀನು ಕೋರಿ ಕಂಚಂದಾನಿ ಅವರ ವಕೀಲ ನಿತೀನ್ ಪ್ರಧಾನ್ ಅವರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಇಂದು ಜಾಮೀನು ನೀಡಿದ್ದಾರೆ.

Edited By : Vijay Kumar
PublicNext

PublicNext

16/12/2020 03:39 pm

Cinque Terre

30.64 K

Cinque Terre

0

ಸಂಬಂಧಿತ ಸುದ್ದಿ