ನವದೆಹಲಿ: ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ಮತ್ತು ವಾಯು ದಾಳಿ ನಡೆಸಿತ್ತು. ಇದೀಗ ಮತ್ತದೇ ಪಿಒಕೆಯಲ್ಲಿನ ಉಗ್ರ ನೆಲೆಗಳ ಮೇಲೆ ಮುಗಿಬಿದ್ದಿದ್ದು, ಈ ಬಾರಿ ಪಿನ್ ಪಾಯಿಂಟ್ ದಾಳಿ ಮೂಲಕ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ.
ಚಳಿಗಾಲದ ಆರಂಭದಿಂದಲೂ ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಲು ಹವಣಿಸುತ್ತಿದ್ದ ಪಾಕಿಸ್ತಾನ ಸೇನೆ ಇದೇ ಕಾರಣಕ್ಕಾಗಿಯೇ ಭಾರತೀಯ ಸೇನೆಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ಮಾಡುತ್ತಿತ್ತು. ಇತ್ತ ಸೇನೆ ಪ್ರತೀಕಾರದಲ್ಲಿ ನಿರತರಾಗಿದ್ದರೆ ಅತ್ತ ಮತ್ತೊಂದು ತುದಿಯಲ್ಲಿ ಉಗ್ರರನ್ನು ಭಾರತದೊಳಗೆ ನುಸುಳಿಸುವುದು ಪಾಕಿಸ್ತಾನದ ಕುತಂತ್ರವಾಗಿತ್ತು. ಆದರೆ ಈ ಎಲ್ಲ ಕುತಂತ್ರಗಳಿಗೂ ತಕ್ಕಶಾಸ್ತಿ ಮಾಡುತ್ತಿರುವ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಿನ್ ಪಾಯಿಂಟ್ ೩ದಾಳಿ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
PublicNext
19/11/2020 09:58 pm