ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂಜಿಲ್ಲೆಯ ನಾನಾ ಪೊಲೀಸ್ ಠಾಣೆಗಳ 9 ಮಂದಿ ಸಬ್ ಇನ್ಸ್ಪೆಕ್ಟರ್‌ಗಳನ್ನು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಎಂ. ನಂಜುಂಡಸ್ವಾಮಿ ಅವರು ದಿಢೀರನೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಅವರು ಈ ಪಿಎಸ್ಐಗಳನ್ನು ದಿಢೀರ್ ವರ್ಗಾವಣೆ ಮಾಡಲು ಬಹುಮುಖ್ಯವಾದ ಒಂದು ಕಾರಣವಿದೆ. ಇತ್ತೀಚೆಗೆ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಅಧಿಕಾರಿಗಳು ಸಭೆ ಕರೆದಿದ್ದರು.
ಈ ವೇಳೆ ಅಕ್ರಮ, ಅನೈತಿಕ ಚಟುವಟಿಕೆ ನಿಯಂತ್ರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಐಜಿಪಿ, ಹಂಪಿ ಡಿವೈಎಸ್ಪಿ ಸೇರಿ ಇತರರ ರಾಜೀನಾಮೆ ಕೇಳಿದ್ದರು. ಆದರೆ, ವಾಸ್ತವದಲ್ಲಿ ಐಜಿಪಿ ಅವರಿಗೆ ರಾಜೀನಾಮೆ ಕೇಳುವ ಹಕ್ಕಿಲ್ಲ. ಮಾನವ ಸಂಪನ್ಮೂಲಗಳನ್ನು ಪೂರೈಕೆ ಮಾಡುವುದಷ್ಟೇ ಅವರ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಐಜಿಪಿ ಅವರ ಈ ನಡೆಗೆ ಬೇಸತ್ತ ಹಂಪಿ ಡಿವೈಎಸ್ಪಿ ಕಾಶೀ ಗೌಡ ರಾಜೀನಾಮೆ ಕೊಡಲು ಮುಂದಾಗಿದ್ದರು. ಇದಿಷ್ಟೇ ಅಲ್ಲ, ಆ ಸಭೆಯಲ್ಲಿ ಪಿಎಸ್ಐಗಳ ಕೊರತೆಯಿದೆ. ಅದನ್ನು ಪೂರೈಸುವಂತೆ ಮೂರೂ ಜಿಲ್ಲೆಗಳ ಡಿವೈಎಸ್ಪಿಗಳು ಕೋರಿದ್ದರು. ಆದರೆ, ಪಿಎಸ್ಐ ಹುದ್ದೆಗಳನ್ನು ನೇಮಕ ಮಾಡದೇ ದಿಢೀರ್ ವರ್ಗಾವಣೆ ಮಾಡುವುದಕ್ಕೆ ಕೈಹಾಕಿರುವುದು ಕೂಡ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿಯವರ ಅಸಹಾಯಕತೆಯನ್ನು ಎತ್ತಿ ಹಿಡಿಯುತ್ತಿದೆ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿವೆ..
PublicNext
18/11/2020 03:18 pm