ಬೆಂಗಳೂರು- ಎಡಿಜಿಪಿ ರವೀಂದ್ರನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದೆ. ಹಾಗೂ ಅಲ್ಲಿ ಯಾವುದೂ ಸರಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ನಿನ್ನೆ ರಾತ್ರಿ 10-40ಕ್ಕೆ ಡಿಜಿ ಪ್ರವೀಣ ಸೂದ್ ಅವರನ್ನು ಭೇಟಿಯಾದ ರವೀಂದ್ರನಾಥ್ ತಮ್ಮ ರಾಜೀನಾಮೆ ನೀಡಿದ್ದಾರೆ. ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ರಾಜೀನಾಮೆ ನೀಡಿದ ನಂತರ ಪ್ರವೀಣ ಸೂದ್ ಅವರು ಕರೆ ಮಾಡುವಂತೆ ನನಗೆ ಮೆಸೇಜ್ ಹಾಕಿದ್ದರು. ಆನಂತರ ನನ್ನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಹಾಗೂ ಬಂದು ಭೇಟಿಯಾಗುವಂತೆ ಸೂಚನೆ ನೀಡಿದ್ದರು. ರಾಜೀನಾಮೆ ನೀಡಿದ ಮೇಲೆ ಭೇಟಿಯಾಗುವ ಅವಶ್ಯಕತೆ ಇಲ್ಲ. ಹೀಗಾಗಿ ಸುಮ್ಮನಾಗಿದ್ದೇನೆ ಎಂದರು.
ಇನ್ನು ರಾಜೀನಾಮೆಗೆ ಕಾರಣ ಕುರಿತು ಮಾತಾಡಿದ ಅವರು ನನ್ನ ಜ್ಯೂನಿಯರ್ ಆಗಿರುವ ಸುನೀಲ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಸೇವಾ ಹಿರಿತನದ ಆದಾರದ ಮೇಲೆ ಬಡ್ತಿ ನೀಡಬೇಕು. ಮೊದಲು ಸೀನಿಯರ್ ಆಮೇಲೆ ಜ್ಯೂನಿಯರ್. ಸೀನಿಯರ್ ಆಗಿರುವ ನನ್ನನ್ನು ಬಡ್ತಿಗೆ ಪರಿಗಣಿಸಿಲ್ಲ ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದರು
PublicNext
29/10/2020 01:56 pm