ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃದ್ಧಾಪ್ಯದಲ್ಲಿ ಅವರನ್ನ ಕಡೆಗಣಿಸಿದ್ದು ಎಷ್ಟು ಸರಿ?: ತಂದೆಯನ್ನೇ ಮನೆಯಿಂದ ಹೊರ ಹಾಕಿದ್ದ ಪುತ್ರರಿಗೆ ಸುಪ್ರೀಂ ಚಾಟಿ

ನವದೆಹಲಿ: ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ? ಅವರಿಂದಾಗಿ ನೀವು ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ಸುಪ್ರೀ ಕೋರ್ಟ್ ತಂದೆಯನ್ನ ಮನೆಯಿಂದ ಹೊರ ಹಾಕಿದ್ದ ಇಬ್ಬರು ಪುತ್ರರಿಗೆ ಚಾಟಿ ಬೀಸಿದೆ.

ನನ್ನನ್ನು ಇಬ್ಬರು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ವಯೋ ವೃದ್ಧ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು, 'ನಿಮ್ಮ ತಂದೆಗೆ ಯಾಕೆ ಸಹಾಯ ಮಾಡುವುದಿಲ್ಲ? ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ? ನೀವು ಈ ಹಂತಕ್ಕೆ ಬರಲು ನಿಮ್ಮ ತಂದೆ ಕಾರಣ ಎಂಬುದನ್ನು ಮರೆಯಬೇಡಿ. ಅವರ ಶ್ರಮದಿಂದ ಈಗ ನೀವು ಉನ್ನತ ಶಿಕ್ಷಣ ಕಲಿತು ಉದ್ಯೋಗ ಪಡೆದುಕೊಂಡಿದ್ದೀರಿ. ನಿಮಗೆ ಆಸ್ತಿ ಬಂದಿರುವುದೇ ನಿಮ್ಮ ತಂದೆಯಿಂದ. ಹೀಗಿರುವಾಗ ಈ ಸಮಯದಲ್ಲೂ ಮನೆಯಿಂದ ಹೊರಹಾಕಿದ್ದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿತು.

ಏನಿದು ಪ್ರಕರಣ?: ನನ್ನನ್ನು ಇಬ್ಬರು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ವೃದ್ಧ ತಂದೆ ಟ್ರಿಬ್ಯುನಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಇಬ್ಬರು ಪುತ್ರರಿಗೆ ತಂದೆಯ ನಿರ್ವಹಣಾ ವೆಚ್ಚವಾಗಿ ಪ್ರತಿ ತಿಂಗಳು 7 ಸಾವಿರ ರೂ. ಪಾವತಿಸುವಂತೆ ಆದೇಶಿಸಿತ್ತು. ತಂದೆ-ತಾಯಿ ನಿರ್ವಹಣೆ, ಕಲ್ಯಾಣಕ್ಕೆ ಸಂಬಂಧಿಸಿದಂತೆ 2007ರ ಹಿರಿಯ ನಾಗರಿಕರ ಕಾಯ್ದೆಯ ಅಡಿ ಈ ಆದೇಶವನ್ನು ಪುತ್ರರು ಪ್ರಶ್ನಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್‌ ತಡೆ ನೀಡಿದ್ದನ್ನು ಪ್ರಶ್ನಿಸಿ ವೃದ್ಧ ತಂದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Edited By : Vijay Kumar
PublicNext

PublicNext

14/10/2020 07:47 am

Cinque Terre

38.08 K

Cinque Terre

3

ಸಂಬಂಧಿತ ಸುದ್ದಿ