ಕೋಲಾರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಪ್ರತಿಕ್ರಿಯಿಸಿದ್ದು, ಇಂದಿನಿಂದ 5 ದಿನಗಳ ಕಾಲ ರಸ್ತೆ ಹಾಗೂ ವಿವಿಧ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತದೆ. ಇಂದು ಇಡೀ ದಿನ ಕಾಮಗಾರಿಗಳ ಮಾಹಿತಿ ಪಡೆದು ನಾಳೆ ಸ್ಥಳಕ್ಕೆ ಭೇಟಿ ನೀಡುವೆ.
ಪೂರ್ಣ, ಅಪೂರ್ಣ ಎರಡೂ ಕಾಮಗಾರಿಯನ್ನ ಪರಿಶೀಲನೆ ನಡೆಸುವೆ ಎಂದಿದ್ದಾರೆ. ಇನ್ನೂ ಗುತ್ತಿಗೆದಾರರ ಸಂಘದ ಮುಖಂಡರ ಭೇಟಿ ವಿಚಾರವಾಗಿಯೂ ಯಾರೊಂದಿಗೂ ರಾಜಿ ಸಂಧಾನ ಮಾತುಕತೆಯೇ ಇಲ್ಲ. ಗುತ್ತಿಗೆದಾರರು ಬಾಕಿ ಮೊತ್ತಕ್ಕಾಗಿ ಮನವಿ ನೀಡಿದ್ದಾರೆ, ಸರ್ಕಾರಕ್ಕೆ ಮಾಹಿತಿ ನೀಡುವೆ. ಕಾಮಗಾರಿ ಪರಿಶೀಲನೆ ಕಾರ್ಯದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಕೋಲಾರದ ಪ್ರವಾಸಿ ಮಂದಿರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.
ವಿಡಿಯೋ ಬಳಸಿ
PublicNext
10/10/2022 05:04 pm