ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಶ್ರೀನಿವಾಸಪುರ ಮೀಸಲು ಕ್ಷೇತ್ರವಾಗುತ್ತೆ - ಶಾಸಕ ಸಮೃದ್ದಿ ಮಂಜುನಾಥ್

Avb

Headline

ಕೋಲಾರ - ಶ್ರೀನಿವಾಸಪುರ ಮೀಸಲು ಕ್ಷೇತ್ರವಾಗುತ್ತೆ - ಶಾಸಕ ಸಮೃದ್ದಿ ಮಂಜುನಾಥ್

ಶ್ರೀನಿವಾಸಪುರ - ಮುಂದಿನ ಚುನಾವಣೆ ವೇಳೆಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗುವ ಎಲ್ಲಾ ಸಂಭವವಿದೆ. ಕಳೆದ ೪೫ ವರ್ಷಗಳ ಸುದೀರ್ಘ ರಾಜಕಾರಣ ಮಾಡಿರುವ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಪರ್ವ ಮುಗಿಯಲಿದೆ ಎಂದು ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಅವರು ಹೇಳಿದರು.ಶ್ರೀನಿವಾಸಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವು ೪೫ ವರ್ಷಗಳ ಹಿಂದೆಯೇ ಮೀಸಲು ವಿಧಾನಸಭಾ ಕ್ಷೇತ್ರವಾಗಬೇಕಿತ್ತು ಆದರೆ ಅದನ್ನು ತಪ್ಪಿಸಲು ದೆಹಲಿಗೆ ಹೋಗಿ ಹಾಲಿ ಮಾಜಿ ಶಾಸಕರು ಮೀಸಲು ವಿಧಾನ ಸಭಾ ಕ್ಷೇತ್ರವಾಗುವುದನ್ನು ತಪ್ಪಿಸಿದ್ದಾರೆ ಎಂದು ಹೇಳಿದರು.

ಶ್ರೀನಿವಾಸಪುರದಲ್ಲಿ ನಲವತ್ತೈದು ವರ್ಷಗಳ ಕಾಲ ಸುದೀರ್ಘ ರಾಜಕಾರಣ ಹಾಲಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ಶಾಸಕ ರಮೇಶ್ ಕುಮಾರ್ ರಾಜಕಾರಣ ಮಾಡಿದ್ದಾರೆ. ಶ್ರೀನಿವಾಸಪುರ ಮೀಸಲು ವಿಧಾನಸಭಾ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

07/12/2024 09:50 am

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ