ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಜಾತಿಯ ಬಲಗೈ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ 5.5ಕ್ಕೆ ಹೆಚ್ಚಿಸಬೇಕು

ಮುಳಬಾಗಿಲು: ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸರ್ಕಾರ ನಿಗದಿ ಪಡಿಸಿರುವ ಶೇ 5 ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ 5.5ಕ್ಕೆ ಹೆಚ್ಚಿಸಬೇಕು. ಜೊತೆಗೆ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ವಿಂಗಡಣೆಯಲ್ಲಿರುವ ಗೊಂದಲಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಬಲಗೈ ಮೀಸಲಾತಿ ಹೋರಾಟ ಸಮಿತಿಯು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ರಾಜ್ಯದಲ್ಲಿ ಆದಿ ಕರ್ನಾಟಕಕ್ಕೆ ( ಬಲಗೈ) ಸೇರಿದ ಸಮುದಾಯದಲ್ಲಿ ಜನ ಹೆಚ್ಚಿದ್ದಾರೆ. ಹೀಗಿದ್ದರೂ ಸರ್ಕಾರ ಬಲಗೈ ಸಮುದಾಯಕ್ಕೆ ಶೇ 5 ಮೀಸಲಾತಿ ನೀಡಿ, ಆದಿದ್ರಾವಿಡ (ಮಾದಿಗ) ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ ನೀಡುವ ಮೂಲಕ ಅನ್ಯಾಯವಾಗಿದೆ. ನೂರಾರು ಜಾತಿ ಒಳಗೊಂಡ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ವಿಂಗಡಿಸಿ, ಆಯಾಯ ಜಾತಿಗಳಿಗೆ ಮೀಸಲಾತಿ ಹಂಚಿರುವುದು ಸರಿಯೇ ಎಂದರು.

Edited By : PublicNext Desk
Kshetra Samachara

Kshetra Samachara

21/10/2024 09:26 pm

Cinque Terre

180

Cinque Terre

0

ಸಂಬಂಧಿತ ಸುದ್ದಿ