ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಮೂರು ಎಕರೆಗಿಂತ ಕಡಿಮೆ ಇರುವ ರೈತರ ಭೂಮಿ ಒತ್ತುವರಿ ಖಂಡನೀಯ - ಸಿಪಿಎಂ ಮುಖಂಡ ಶ್ರೀನಿವಾಸ್

ಶ್ರೀನಿವಾಸಪುರ : ಕಳೆದ ಐದಾರು ದಿನಗಳ ಹಿಂದೆ ಮೂರು ಎಕರೆ ಭೂಮಿ ಇರುವಂತಹ ಎಸ್‌ಸಿ, ಸಮುದಾಯಕ್ಕೆ ಸೇರಿದ ಭೂಮಿಯಲ್ಲಿ ಅರಣ್ಯ ಇಲಾಖೆಯು ಗಿಡಗಳನ್ನು ನಾಟಿ ಮಾಡಲು ಹೊರಟಿದೆ ಸಿಪಿಎಂ ಮುಖಂಡ ಗೋಪಾಲ್ ಅವರು ತಿಳಿಸಿದರು. ‌

ಶ್ರೀನಿವಾಸಪುರ ತಾಲ್ಲೂಕಿನ ಕೋಟಬಲ್ಲಪಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ‌ ಅವರು, ಅರಣ್ಯ ಇಲಾಖೆ ಗಿಡಗಳನ್ನು ನಾಟಿ ಮಾಡಲು ಹೊರಟಿದೆ ಆ ಸಮಯದಲ್ಲಿ ಆ ಮಹಿಳೆಯು ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯದರ್ಶಿಗಳೇ ಮೂರು ಎಕರೆ ಗಿಂತ ಕಡಿಮೆ ಇರುವ ಜಮೀನುಗಳ ತಂಟೆಗೆ ಹೋಗ ಬೇಡಿ ಎಂದು ತಿಳಿಸಿದ್ದರೂ ಸಹ ಸ್ಥಳೀಯ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಚರಣೆ ಮಾಡುತ್ತಿದ್ದು, ಈ ವಿಚಾರದಲ್ಲಿ ಸ್ಥಳೀಯ ಅಧಿಕಾರಿಗಳು ದೊಡ್ಡವರಾ ಅರ್ಥವಾಗುತ್ತಿಲ್ಲ, ಜಮೀನಿನ ರೈತರಿಗೆ ನ್ಯಾಯಕೊಡಿಸುವುದಕ್ಕಾಗಿ ಪೊಲೀಸ್ ಇಲಾಖೆ ಮೊರೆಹೊಗಲಾಗಿ ಡಿವೈಎಸ್‌ಪಿ, ಸಿಪಿಐ,ಪಿಎಸ್‌ಐ ಹಾಗು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಲಾಗಿದೆ ಮೂರು ಎಕರೆ ಒಳಗಡೆ ಇರುವ ಭೂಮಿಯಲ್ಲಿ ನಮ್ಮ ರೈತರು ಸ್ವಾದೀನದಲ್ಲಿ ಇದ್ದಾರೆ.

ಸ್ವಾಧೀನ ಇರುವಂತಹ ರೈತರನ್ನ ಒಕ್ಕಲೆಬ್ಬಿಸಬಾರದು ಎಂದು ಸರ್ಕಾರ ತಿಳಿಸಿದೆ ಆದರೆ ಅಧಿಕಾರಿಗಲಕು ಸರ್ಕಾರ ಆದೇಶ ಪಾಲನೆಯನ್ನು ಮಾಡುತ್ತಿಲ್ಲ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

22/10/2024 07:28 pm

Cinque Terre

100

Cinque Terre

0

ಸಂಬಂಧಿತ ಸುದ್ದಿ