ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ‌ : ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅಂಗಡಿಗಳ ಮಾಲೀಕರು ಪ್ರತ್ಯೇಕ ಪರವಾನಿಗೆ ಪಡೆಯುವುದು ಕಡ್ಡಾಯ

ಕೋಲಾರ : ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ತಂಬಾಕು ನಿಯಂತ್ರಣ ಮತ್ತು ಕೋಟ್ಪಾ ಕಾಯ್ದೆಯ ಅನುಷ್ಠಾನದ ಕುರಿತಂತೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಂಗಳ ಎಸ್.ವಿ ರವರ ಅಧ್ಯಕ್ಷತೆಯಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡಲು ಇನ್ನುಂದೆ ಕಡ್ಡಾಯವಾಗಿ ತಂಬಾಕು ಮಾರಾಟ ಪರವಾನಿಗೆ ಪಡೆಯ ಬೇಕಾಗಿರುತ್ತದೆ.

ಇತ್ತೀಚೆಗೆ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ತಂಬಾಕು ಉತ್ಪನ್ನಗಳ ಮಾರಾಟ ಪರಾವಾನಿಗೆ ನೀತಿಯನ್ನು ಜಾರಿಗೆ ತಂದಿದ್ದು, ಅದರಂತೆ ಪರವಾನಿಗೆ ಪಡೆದವರ ಕುರಿತಂತೆ ಚರ್ಚಿಸಿ ಪರವಾನಿಗೆಯನ್ನು ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಪರವಾನಿಗೆ ಪಡೆಯುವ ವಿಧಾನ- ನಿಗಧಿತ ನಮೂನೆಯಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸುವುದು. ಅಧಿಕಾರಿಗಳು ತಪಾಸಣೆಗೆ ಬಂದಾಗ ಸಂಪೂರ್ಣ ಸಹಕಾರ ನೀಡುವುದು. ಕೋಟ್ಪಾ ಕಾಯ್ದೆಯ ಅನುಸಾರ ನಿಗಧಿತ ಸೈನೇಜ್ ಬೋರ್ಡುಗಳನ್ನು ಪ್ರದರ್ಶಿಸುವುದು. ಕೋಟ್ಟಾ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಅಫಿಡಿವೈಡ್ ಸಲ್ಲಿಸುವುದು. ನಿಗಧಿತ ಶುಲ್ಕ ಪಾವತಿ. ಪರವಾನಿಗೆ ಪಡೆಯುವುದು/ ಲೈಸೆನ್ಸ್ ನಿರಾಕರಣೆ ಕುರಿತ ಹಿಂಬರಹ ಪಡೆಯುವುದು.

ತಂಬಾಕು ಮಾರಾಟ ಪರವಾನಿಗೆ ಇಲ್ಲದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

22/10/2024 08:18 pm

Cinque Terre

80

Cinque Terre

0

ಸಂಬಂಧಿತ ಸುದ್ದಿ