ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಅಂಗನವಾಡಿ ಸಹಾಯಕಿಯ ಎಡವಟ್ಟಿನಿಂದ ಶೌಚಾಲಯದಲ್ಲಿ ಬಂಧಿಯಾದ ಮಗು

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹಾರೋಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಾಲ್ಕು ವರ್ಷದ ಮಗುವನ್ನು ಶೌಚಾಲಯದಲ್ಲಿಯೇ ಬಿಟ್ಟು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಅಂಗನವಾಡಿ ಸಮಯ ಮುಗಿದ ವೇಳೆ ಮಗು ಶೌಚಾಲಯಕ್ಕೆ ಹೋಗಿದ್ದು, ಅಲ್ಲೇ ನಿದ್ದೆಗೆ ಜಾರಿದೆ. ಮನೆಗೆ ಮಗು ಬರದ ಕಾರಣ ಇಡೀ ರಾತ್ರಿ ಪೋಷಕರು ಹುಡುಕಾಟ ನಡೆಸಿದ್ದಾರೆ.

ಅಂಗನವಾಡಿ ಕೇಂದ್ರದೊಳಗೆ ಬೆಳಿಗ್ಗೆ ಪರಿಶೀಲಿಸಿದಾಗ ಶೌಚಾಲಯದಲ್ಲಿ ಮಗು ಇರುವುದು ಕಂಡು ಬಂದಿದೆ. ಅಂಗನವಾಡಿ ಬಿಡುವ ವೇಳೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಮಗು ಅಲ್ಲೇ ನಿದ್ದೆಗೆ ಜಾರಿದ್ದು, ತಾಯಿ ಕೂಗಿಗೆ ಎಚ್ಚರಗೊಂಡು ಸ್ಪಂದಿಸಿದೆ. ಮಗುವಿಗೆ ಯಾವುದೇ ತೊಂದರೆಯಾಗಿಲ್ಲ.

Edited By :
PublicNext

PublicNext

17/09/2022 09:23 am

Cinque Terre

29.18 K

Cinque Terre

0

ಸಂಬಂಧಿತ ಸುದ್ದಿ