ವರದಿ: ರವಿ ಕುಮಾರ್, ಕೋಲಾರ
ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ದೇವರ ಭೂತಮ್ಮ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಉತ್ಸವ ಮೂರ್ತಿಯ ಕೋಲು ಮುಟ್ಟಿದಕ್ಕ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ನಡೆದಿದೆ.
ಗ್ರಾಮದ ಶೊಭಾ ಹಾಗೂ ರಮೇಶ್ ದಂಪತಿಗೆ ಸೇರಿರುವ ಬಾಲಕ ಚೇತನ್ 10 ದಿನಗಳ ಹಿಂದೆ ನಡೆದ ಉತ್ಸವದಲ್ಲಿ ಕೆಳಗೆ ಬಿದಿದ್ದ ಕೋಲನ್ನು ಮುಟ್ಟಿದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ದೇವರ ಮೂರ್ತಿಯನ್ನು ಶುಚಿಗೊಳಿಸಬೇಕು,ಇದಕ್ಕಾಗಿ 60 ಸಾವಿರ ದಂಡ ಕಟ್ಟಬೇಕು ಊರಿನ ಮೇಲ್ಜಾತಿ ಮಂದಿ ಆಗ್ರಹಿಸಿದ್ದಾರೆ.
ಬಾಲಕನ ತಾಯಿ ಶೋಭ ತಮ್ಮ ಬಳಿ ನೀಡಲು ಅಷ್ಟೊಂದು ಹಣವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ,ಹಣ ನೀಡಲು ಆಗದಿದ್ದರೇ ಊರು ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,8 ಜನರ ವಿರುದ್ಧ FIR ದಾಖಲಿಸಿ ಬಂಧಿಸಿದ್ದಾರೆ.ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜ ಮತ್ತುಎಸ್ ಪಿ ದೇವರಾಜ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶೋಭಾ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗ್ತಿದ್ದು,ಜಿಲ್ಲಾಡಳಿತದಿಂದ 25 ಸಾವಿರ ಚೆಕ್ ನೀಡಲಾಗಿದೆ.ಸಂಸದ ಮುನಿಸ್ವಾಮಿ ವೈಯಕ್ತಿಕವಾಗಿ 50 ಸಾವಿರ,ಮಾಲೂರು ಶಾಸಕರಾದ ನಂಜೇಗೌಡ ವೈಯಕ್ತಿಕವಾಗಿ 1 ಲಕ್ಷ ನೀಡಿ ಸಾಂತ್ವನ ಹೇಳಿದ್ದಾರೆ.
ಬಳಿಕ ಗ್ರಾಮದ ಭೂತಮ್ಮ ದೇವಾಲಯದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಲಿತ ಕುಟುಂಬವನ್ನು ದೇವಾಲಯದಲ್ಲಿ ಪ್ರವೇಶ ಮಾಡಿಸಿ, ಪೂಜೆ ಮಾಡಲಾಯ್ತು.
PublicNext
23/09/2022 06:31 pm