ಕೋಲಾರ : ಸ್ವ ಉದ್ಯೋಗದಲ್ಲಿ ಬಂಡವಾಳ ತೊಡಗಿಸುವ ಮುನ್ನ ಹಲವು ಆಯಾಮಗಳಲ್ಲಿ ಆಲೋಚಿಸಿ ಪೂರ್ವ ಯೋಜನೆಯೊಂದಿಗೆ ಸ್ವಯಂ ಉದ್ಯೋಗ ಆರಂಭಿಸುವುದು ತುಂಬಾ ಒಳಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹೇಳಿದರು.
ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘು ವಾಹನಾ ಚಾಲನೆ, ಹೊಲಿಗೆ ಯಂತ್ರ ಹಾಗೂ ಬ್ಯೂಟಿಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ, ಆತ್ಮಸ್ಥೈರ್ಯದೊಂದಿಗೆ ಮುನ್ನುಗುವ ಶಕ್ತಿ ನಮ್ಮಲ್ಲಿರಬೇಕು. ಆತ್ಮವಿಶ್ವಾಸ ಕೊರತೆಯಾದಾಗ ನಮ್ಮಲ್ಲಿ ಬದಲಾವಣೆ ಕಾಣುವುದು ಅಸಾಧ್ಯದ ಮಾತು. ಬೇರೆಯವರ ಟೀಕೆ, ವಿಮರ್ಶೆಗಳಿಗೆ ಎದೆಗುಂದದೆ ಛಲದಿಂದ ಜೀವನ ಸಾಗಿಸಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ತಿಳಿಸಿದರು.
ಸ್ವ ಉದ್ಯೋಗದಲ್ಲಿ ಅಭಿವೃದ್ದಿಯಾಗಬೇಕಾದರೆ ಗುಣಮಟ್ಟ, ನಿಗದಿತ ಸಮಯಕ್ಕೆ ಸೇವೆ ಕಾಯ್ದುಕೊಳ್ಳುವುದರ ಜೊತೆಗೆ ಗ್ರಾಹಕರನ್ನು ಅತ್ಯಂತ ಆತ್ಮೀಯತೆ, ಗೌರವದಿಂದ ಕಾಣಬೇಕು. ನಮ್ಮ ಮೇಲೆ ನಂಬಿಕೆ, ವಿಶ್ವಾಸ ಇರುವವರೆಗೂ ಮಾತ್ರ ಸ್ವ ಉದ್ಯೋಗದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ಇತ್ತಿಚೀಗೆ ಹಲವರು ರಾತ್ರೋ ರಾತ್ರಿ ಹಣ ಸಂಪಾದಿಸಬೇಕೆಂಬ ಉದ್ದೇಶದಿಂದ ಯಾವುದೇ ಪೂರ್ವ ಮಾಹಿತಿ ಪಡೆದಯದೇ ಹಣ ದೋಚುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಹೆಚ್ಚಿನ ಬಡ್ಡಿಗೆ ಆಸೆ ಬಿದ್ದು, ಹಗರಣಗಳು ಮಾಡುವ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಪರಿಪಾಠ ಬಿಟ್ಟು ಮೋಸ ಹೋಗುವ ಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Kshetra Samachara
04/10/2024 09:42 pm