ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಕೆಜಿಎಫ್: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ‌ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬಟ್ ರ್ಸನ್ ಪೊಲೀಸರು ಬಂಧಿಸಿ ಆತನಿಂದ 6 ಕೆಜಿ 565 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಬಟ್ ರ್ಸನ್ ಪೇಟೆ‌ ಪೊಯ ಠಾಣಾ ಸರಹದ್ದಿನ ಮಲ್ಲಂಪಲ್ಲಿ ಕಡೆಯಿಂದ ಬೇತಮಂಗಲ ಕಡೆ ಹೋಗುವ ರಸ್ತೆಯ ಪಕ್ಕದ ‌ಜಮೀನಿನಲ್ಲಿ ಗಾಂಜಾ ಮಾರಾಟ ಕುರಿತು ರಾಬಟ್ ರ್ಸನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ತ್ಯಾಗರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆಂದ್ರಪ್ರದೇಶದ ರಾಜ್ಯದ ಅಣಕಾಪಲ್ಲಿ ಜಿಲ್ಲೆಯ ‌ವಾಸಿಯಾದ ಮೊಲುಗು ಗಣೇಶ್ ಎಂಬಾತನನ್ನು ಬಂಧಿಸಿ ಆತನಿಂದ 5 ಲಕ್ಷ 20 ಸಾವಿರ ಮೌಲ್ಯದ 6 ಕೆಜಿ. 565 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : PublicNext Desk
PublicNext

PublicNext

18/12/2024 04:21 pm

Cinque Terre

9.35 K

Cinque Terre

0