ಕೋಲಾರ: ಕೋಲಾರ ನಗರದ ಡೂಂಲೈಟ್ ಸರ್ಕಲ್ ಹಾಗೂ ಟೇಕಲ್ ರಸ್ತೆಯಲ್ಲಿ ಇರುವ ಎಂಟು ಮಳಿಗೆಗಳಲ್ಲಿ ಸರಣಿ ಕಳ್ಳತನವಾಗಿದೆ. ತಮ್ಮ ಕೈ ಚಳಕ ತೋರಿಸಿರುವ ಕಳ್ಳರು ಔಷಧಿ ಮಳಿಗೆಗಳು, ದಿನಸಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ.
ಗಡಾರಿಗಳಲ್ಲಿ ಮಳಿಗೆಯ ಶೆಟರ್ ಗಳನ್ನು ಮೀಟಿ ಒಳ ನುಗ್ಗಿರುವ ಚೋರರು ಮಳಿಗೆಗಳ ಕ್ಯಾಶ್ ಕೌಂಟರ್ ಗಳಲ್ಲಿನ ನಗದು ಮಾತ್ರ ಕಳ್ಳತನ ಮಾಡಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
PublicNext
18/12/2024 04:18 pm