ವಾಷಿಂಗ್ಟನ್ : ತನ್ನ ಪತಿ ಹೆಚ್ಚು ಕಾಮಾಸಕ್ತಿ ಹೊಂದಿರುವ ಕಾರಣ ಮಡದಿಯೊಬ್ಬಳು ತನ್ನ ಅನುಪಸ್ಥಿಯಲ್ಲಿ ಗಂಡನಿಗಾಗಿ ತನ್ನಂತೆಯೇ ಕಾಣುವ ಲೈಗಿಂಕ ಗೊಂಬೆ (ಸೆಕ್ಸ್ ಡಾಲ್) ಖರೀದಿಸಿದ್ದಾಳೆ.ಅಮೆರಿಕಾದ ವಾಷಿಂಗ್ಟನ್ ನಲ್ಲಿರುವ ರಾಂಡಿ ಕ್ಯಾಲಮ್ ಗ್ರೇ ಮತ್ತು ಚಾರ್ ಗ್ರೇ ದಂಪತಿ ಈ ಉಪಾಯದ ಗುಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಡೀ’ ಹೆಸರಿನ ಈ ಸೆಕ್ಸ್ ಗೊಂಬೆಯಿಂದಾಗಿ ಇಂದು ಈ ದಂಪತಿ ಅನ್ಯೋನ್ಯವಾಗಿದ್ದಾರೆಂದು ವರದಿಯಾಗಿದೆ. ಡೀ ಹೆಸರಿನ ಬೆಲೆ £1500 (ಸುಮಾರು ರೂ 1.43 ಲಕ್ಷ). ಈ ಗೊಂಬೆಯೂ ಕ್ಯಾಲಮ್ ನ ಹೆಚ್ಚಿನ ಲೈಂಗಿಕ ಬಯಕೆಯನ್ನು ನಿವಾರಿಸುವುದು. ಹಾಗಾಗಿ ಈ ಗೊಂಬೆ ಕೇವಲ ನಿರ್ಜೀವ ಗೊಂಬೆಯಲ್ಲ ನಮ್ಮ 'ಕುಟುಂಬ ಸದಸ್ಯ' ಎಂದು ಚಾರ್ ಹೇಳಿಕೊಂಡಿದ್ದಾರೆ.
ಸದ್ಯ ಸೆಕ್ಸ್ ಗೊಂಬೆಯೊಂದಿಗೆ ದಂಪತಿಗಳು ಪೋಸ್ ನೀಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
PublicNext
19/07/2022 08:29 am