ಕೀವ್:ರಷ್ಯಾ ದೇಶ ಉಕ್ರೇನ್ ಮೇಲೆ ದಾಳಿ ಆರಂಭಿಸಿ ಈಗ 100 ದಿನಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿಯೇ ರಾಜಧಾನಿ ಕೀವ್‌ನ ಹಲವು ಪ್ರದೇಶದ ಮೇಲೆ ದಾಳಿ ಕೂಡ ಮಾಡಿದೆ.
ರೈಲ್ವೆ ಘಟಕ ಮತ್ತು ಟಿ-72 ಯುದ್ಧ ಟ್ಯಾಂಕರ್‌ಗಳನ್ನ ಗುರಿಯಾಗಿಸಿ ರಷ್ಯಾ ದೇಶದ ದಾಳಿ ಮಾಡಿದೆ. ಇದರ ಪರಿಣಾಮ ದಾಳಿಯಲ್ಲಿ ಭಾರೀ ಹಾನಿ ಆಗಿದೆ.
ವಿಶ್ವ ಸಂಸ್ಥೆ ಪ್ರಧಾನಿ ಕಾರ್ಯದರ್ಶಿ ಆಯಂಟಾನಿಯಾ ಗ್ಯುಟೆರೆರ್ಸ್ ಉಕ್ರೇನ್‌ಗೆ ಭೇಟಿ ಕೊಟ್ಟಿದ್ದರು. ಈ ಭೇಟಿ ಬಳಿಕ ರಾಜಧಾನಿ ಕೀವ್‌ನ ಅಕ್ಕ-ಪಕ್ಕದ ಪ್ರದೇಶದ ಮೇಲೆ ದಾಳಿ ನಡೆಸಿರಲಿಲ್ಲ. ಆದರೆ ಈಗ ರಷ್ಯಾ ಮತ್ತೆ ದಾಳಿ ನಡೆಸಿದೆ.
PublicNext
06/06/2022 10:17 am