ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭುಗಿಲೆದ್ದ ಹಿಂಸಾಚಾರ ಲಂಕಾದಹನ: ದೇಶದಾದ್ಯಂತ ಕರ್ಫ್ಯೂ ಜಾರಿ

ಕೊಲಂಬೋ: ದೇಶದಲ್ಲಿ ಉಂಟಾದ ಆರ್ಥಿಕ ದಿವಾಳಿತನದಿಂದ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ.

ಇದಾದ ಬೆನ್ನಲ್ಲೆ ದಂಗೆ ಎದ್ದ ಜನರಿಂದ ಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶ್ರೀಲಂಕಾದ ವಾಯುವ್ಯ ಪ್ರಾಂತ್ಯದ ಕುರುನೇಗಾಲ ನಗರದಲ್ಲಿರುವ ಮಹಿಂದಾ ರಾಜಪಕ್ಸೆ ಅವರ ನಿವಾಸಕ್ಕೆ ಸರ್ಕಾರದ ವಿರೋಧಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ.

ಗಾಲೆ ಫೋರ್ಸ್ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂದು ಸರ್ಕಾರದ ವಿರೋಧಿ ಗುಂಪು ಹಲವು ನಾಯಕರ ಮನೆಗೆ ಬೆಂಕಿ ಹಚ್ಚಿ ಕ್ರೌರ್ಯತೆ ಮೆರೆದಿದೆ.

ನಿರ್ಗಮಿತ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿವಾಸಕ್ಕೆ ಬೆಂಕಿ ಹಚ್ಚುವ ಮುನ್ನ ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಶ್ರೀಲಂಕಾದ ಮೊರಟುವಾ ಮೇಯರ್ ಸಮನ್ ಲಾಲ್ ಫೆರ್ನಾಂಡೋ ಮತ್ತು ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಾನಾ, ಮಹಿಪಾಲ ಹೆರಾತ್, ಥಿಸ್ಸಾ ಕುಟ್ಟಿಯಾರಾಚಿ ಮತ್ತು ನಿಮಲ್ ಲಾಂಜಾ ಅವರ ಅಧಿಕೃತ ನಿವಾಸಗಳಿಗೂ ಬೆಂಕಿ ಹಚ್ಚಿದ್ದಾರೆ.

Edited By : Nirmala Aralikatti
PublicNext

PublicNext

10/05/2022 11:12 am

Cinque Terre

91.62 K

Cinque Terre

10

ಸಂಬಂಧಿತ ಸುದ್ದಿ