ಉಕ್ರೇನ್: ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಜೀವ ಹಿಂಡಿ ಬಿಟ್ಟಿದ್ದಾರೆ. ಉಕ್ರೇನ್ ಸೇನೆಯಲ್ಲೋ ಇಲ್ಲವೇ ಪೊಲೀಸ್ ನಲ್ಲಿ ಕಾರ್ಯನಿರ್ಹಿಸುತ್ತಿದ್ದವರ ಹೆಂಡಿರನ್ನೂ ಈ ರಷ್ಯಾ ಸೈನಿಕರು ಬಿಟ್ಟಿಲ್ಲ ನೋಡಿ. ಅವರನ್ನೂ ಸಾಕಷ್ಟು ಟಾರ್ಚರ್ ಮಾಡಿ ಬಿಟ್ಟಿದ್ದಾರೆ.
ಉಕ್ರೇನ್ ದೇಶದ ಮಾರಿಯುಫೋಲ್‌ನಿಂದ ತಪ್ಪಿಸಿಕೊಂಡು ಓಡಿ ಹೋಗ್ತಿದ್ದ ಮಹಿಳೆಯರನ್ನ ಸೆರೆಹಿಡಿದಿದ್ದಾರೆ. ಬಟ್ಟೆಯನ್ನ ಬಿಚ್ಚಿಸಿದ ಪರಿಶೀಲೆಯನ್ನೂ ಮಾಡಿದ್ದಾರೆ.
ಇವರೆಲ್ಲ ಉಕ್ರೇನ್ ಸೋಲ್ಜರ್ಸ್ ಪತ್ನಿಯರು ಉಕ್ರೇನ್ ಪೊಲೀಸರ ಹೆಂಡ್ತಿಯರು ಅಂತ ಗೊತ್ತಾಗಿದ್ದೇ ತಡ, ಅವರಿಗೆ ಫುಲ್ ಧಮ್ಕಿ ಹಾಕಿದ್ದಾರೆ. ಮನಸೋಯಿಚ್ಛೆ ಟಾರ್ಚರ್ ಮಾಡಿ, ಹೆಚ್ಚು ಕಡಿಮೆ ಮಾಡಿದ್ರೋ, ನಿಮ್ಮ ಗಂಡಂದಿರ ತಲೆಯನ್ನ ಕತ್ತರಿಸಿ ಪೆಟ್ಟಿಗೆಯಲ್ಲಿ ಹಾಕಿ ಕಳಿಸೋದಾಗಿಯೂ ಬೆದರಿಸಿದ್ದಾರೆ. ಇದನ್ನೆಲ್ಲ ಅನುಭವಿಸಿದ್ದ ಮಹಿಳೆಯೊಬ್ಬರು ಈಗ ಆ ಸತ್ಯ ಬಿಚ್ಚಿಟ್ಟಿದ್ದಾರೆ.
PublicNext
06/05/2022 05:49 pm