ಕೀವ್: ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ರಷ್ಯಾ ದೇಶ ತನ್ನ ದಾಳಿಯ ಆ ಕ್ರೌರ್ಯವನ್ನ ಈಗ ಎಳೆ ಎಳೆಯಾಗಿಯೇ ಬಿಚ್ಚಿಟಿದ್ದಾರೆ. ತಮ್ಮ ಇಡೀ ಕುಟುಂಬದ ಮೇಲೆ ದಾಳಿ ನಡೆಸಿ ಸೆರೆಹಿಡಿಯಲು ಪ್ರಯತ್ನಿಸಿದ್ದರು ಅನ್ನೋ ಆ ಸತ್ಯವನ್ನೂ ಈಗ ಬಹಿರಂಗೊಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದರ ಪರಿ ನಿಜಕ್ಕೂ ಘೋರವೇ ಆಗಿದೆ ಬಿಡಿ. ಯಾರನ್ನೂ ಬಿಡದೇ ಇರೋ ರಷ್ಯಾ ಸೈನಿಕರು ಯುವತಿಯರನ್ನ ರೇಪ್ ಮಾಡಿದ್ದಾರೆ. ಬೃಹತ್ ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿ ನೆಲಕ್ಕುರುಳಿಸಿದ್ದಾರೆ. ಇಡೀ ಉಕ್ರೇನ್ ದೇಶವನ್ನೇ ನುಂಗಿ ಹಾಕಲು ಬಂದಿದ್ದ ರಷ್ಯಾ ಸೇನೆ, ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಕುಟುಂಬವನ್ನ ಸೆರೆ ಹಿಡಿಯೋ ಪ್ಲಾನ್ ಕೂಡ ನಡೆಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಎಲ್ಲ ಕೌರ್ಯವನ್ನ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಹೇಳಿಕೊಂಡಿದ್ದಾರೆ. ತಮ್ಮ ಇಡೀ ಫ್ಯಾಮಿಲಿಯನ್ನ ಸೆರೆಹಿಡಿಯೋ ಪ್ಲಾನ್ ಅನ್ನೇ ರಷ್ಯಾ ಸೈನಿಕರು ಹಾಕಿದ್ದರು ಅಂತಲೇ ಝಲೆನ್ಸ್ಕಿ್ ಹೇಳಿಕೊಂಡಿದ್ದಾರೆ.
PublicNext
30/04/2022 04:04 pm