ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸೋದರಲ್ಲಿಯೇ ಬ್ಯುಜಿ ಆಗಿ ಬಿಟ್ಟಿದ್ದಾರೆ. ಜೊತೆಗೆ ತಮ್ಮ ಜೀವ ಭಯದಲ್ಲೂ ಬದುಕುತ್ತಿದ್ದಾರೆ. ಆದರೆ ಇತ್ತ ಇದೇ ಪುಟಿನ್ ಫ್ಯಾಮಿಲಿಯಲ್ಲಿ ಯಡವಟ್ಟುಗಳಾಗುತ್ತಿವೆ. ಪುಟಿನ್ ಹಿರಿಯ ಪುತ್ರಿ ಈಗ ತನ್ನ ಡಚ್ ಪತಿಯಿಂದ ಬೇರ್ಪಟ್ಟಿದ್ದಾರೆ.
ಹೌದು. ಪುಟಿನ್ ಹಿರಿಯ ಪುತ್ರಿ ಮಾರಿಯಾ ವೊರೊಂಟ್ಸೊವಾ ತನ್ನ ಡಚ್ ಪತಿ ಉದ್ಯಮಿ ಜೋರಿಟ್ ಫಾಸೆನ್ ರಿಂದ ಬೇರ್ಪಟ್ಟಿದ್ದಾರೆ. ವಿಚ್ಛೇದನ ಪಡೆಯುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ಬೇರ್ಪಟ್ಟ ಸುದ್ದಿ ಹೊರ ಬಿದ್ದಿದೆ.
ವಿಶೇಷ ಅಂದ್ರೆ ಮಾರಿಯಾ,ಮಕ್ಕಳಲ್ಲಿ ಕಾಣಿಸುವ ಅನುವಂಶಿಕ ಕಾಯಿಲೆಗಳ ಗುಣಪಡಿಸೋ ಪರಿಣಿತೆ. ಇಷ್ಟು ವಿಶೇಷವಾದ ಪ್ರತಿಭೆ ಇರೋ ಮಾರಿಯಾ, ರಷ್ಯಾದಲ್ಲಿ ಶ್ರೀಮಂತ ವಿದೇಶಿಯರಿಗಾಗಿಯೇ ವೈದ್ಯಕೀಯ ಕೇಂದ್ರ ತೆರೆಯೋರಿದ್ದರು. ಆದರೆ ಈಗಿನ ಬೆರಳವಣಿಗೆಯಿಂದ ಮಾರಿಯಾ ಆ ಕನಸು ಧ್ವಂಸಗೊಂಡಿದೆ ಅಂತಲೇ ಹೇಳಲಾಗುತ್ತಿದೆ.
PublicNext
25/03/2022 10:40 am