ಕೀವ್: ಉಕ್ರೇನ್‌ನ ಪರವಾಗಿ ಸಂಧಾನ ಮಾತುಕತೆಯಲ್ಲಿ ಹಿರಿಯ ಅಧಿಕಾರಿಯನ್ನೇ ರಷ್ಯಾ ತನ್ನ ಗೂಢಚರನಾಗಿ ನೇಮಿಸಿಕೊಂಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಖಚಿತವಾದ ಬೆನ್ನಲ್ಲೇ ರಷ್ಯಾದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಡೆನಿಸ್ ಕಿರೀವ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಗೂಢಚರ್ಯೆ ನಡೆಸುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ಉಕ್ರೇನಿನ ಭದ್ರತಾ ಪಡೆಗಳು ಡೆನೀಸ್‌ನನ್ನು ಬಂಧಿಸಲು ಹೋಗಿದ್ದರು. ಆಗ ಪ್ರತಿರೋಧ ಒಡ್ಡಿದ್ದಕ್ಕಾಗಿ ನಡೆದ ಗುಂಡಿನ ಚಕಮಕಿಯಲ್ಲಿ ಡೆನೀಸ್ ಮೃತಪಟ್ಟಿದ್ದಾನೆ ಎಂದು ಉಕ್ರೇನಿನ ಸಂಸದರೇ ಹೇಳಿದ್ದಾರೆ. ರಷ್ಯಾದ ದಿನಪತ್ರಿಕೆ ಪ್ರಾವ್ಡಾ ಕೂಡಾ ಉಕ್ರೇನಿನ ಭದ್ರತಾ ಪಡೆಗಳ ಬಳಿ ಡೆನೀಸ್ ಗೂಢಚರ್ಯೆ ನಡೆಸುತ್ತಿರುವ ಬಗ್ಗೆ ಟೆಲಿಫೋನ್ ಸಂವಾದ ಸೇರಿದಂತೆ ಹಲವಾರು ಸಾಕ್ಷಿಗಳಿದ್ದವು. ಹೀಗಾಗಿ ಭದ್ರತಾಪಡೆಗಳೇ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಆರೋಪಿಸಿದೆ.
PublicNext
07/03/2022 02:40 pm