ಕೀವ್: ಉಕ್ರೇನ್‌ನ ಕಾರ್ಕಿವ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. 112 ಮಂದಿ ಗಾಯಗೊಂಡಿದ್ದಾರೆ ಎಂದು ಕಾರ್ಕಿವ್ ಮೇಯರ್ ಬುಧವಾರ ತಿಳಿಸಿದ್ದಾರೆ.
ಕಾರ್ಕಿವ್ ನಗರದ ಪ್ರಾದೇಶಿಕ ಆಡಳಿತದ ಕಟ್ಟಡ ಫ್ರೀಡಮ್ ಸ್ಕ್ವೇರ್ ಮೇಲೆ ಮಂಗಳವಾರ ಬೆಳಗ್ಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ರಷ್ಯಾದ ದಾಳಿಯಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಹ ಮೃತಪಟ್ಟಿದ್ದರು. ನವೀನ್ ಸಾವಿಗೆ ಡಚ್ ರಾಯಭಾರಿ ಮಾರ್ಟಿನ್ ಬರ್ಗ್ ಸಂತಾಪ ಸೂಚಿಸಿದ್ದಾರೆ.
ಇನ್ನು ರಷ್ಯಾದ ಕ್ಷಿಪಣಿ ಕಾರ್ಕಿವ್‌ನಲ್ಲಿರುವ ರಾಷ್ಟ್ರೀಯ ಪೊಲೀಸ್ ಕಟ್ಟಡಕ್ಕೆ ಅಪ್ಪಳಿಸಿದ ವಿಡಿಯೋವನ್ನು ಉಕ್ರೇನ್ ರಕ್ಷಣಾ ಇಲಾಖೆಯು ಟ್ವೀಟ್ ಮಾಡಿದೆ. ಜೊತೆಗೆ ಇದು 'ರಷ್ಯಾದ ಶಾಂತಿಯ ಮಂತ್ರ' ಎಂದು ಕುಟುಕಿದೆ.
PublicNext
02/03/2022 05:25 pm