ಕೀವ್: ರಷ್ಯಾ-ಉಕ್ರೇನ್ ಯುದ್ಧ ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಮೇಲೆ ಬುಧವಾರವೂ ಆಕ್ರಮಣವನ್ನು ತೀವ್ರಗೊಳಿಸಿರುವ ರಷ್ಯಾ ಸೇನೆಯು ಖೆರ್ಸನ್ ನಗರವನ್ನು ಸಂಪೂರ್ಣ ವಶಕ್ಕೆ ಪಡೆದುಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯವು, 'ತನ್ನ ಸೇನೆಯು ದಕ್ಷಿಣ ಉಕ್ರೇನ್‌ನ ನಗರವಾದ ಖೆರ್ಸನ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದೆ' ಎಂದು ಹೇಳಿಕೊಂಡಿದೆ. ರಷ್ಯಾದ ಮಿಲಿಟರಿ ಕಮಾಂಡ್ ಖೆರ್ಸನ್ ಪುರಸಭೆ ಮತ್ತು ಇತರ ಪುರಸಭೆಯ ಇಲಾಖೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿಯೂ ಭಾರೀ ಶೆಲ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
PublicNext
02/03/2022 03:46 pm