ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ಆರ್ಥಿಕತೆ ಭಾರತಕ್ಕಿಂತಲೂ ಉತ್ತಮವಾಗಿದೆ ಎಂದು ಇಸ್ಲಾಮಾಬಾದ್ ನಲ್ಲಿ ಹೇಳಿದ್ದರು. ಈ ಮಾತು ಇನ್ನು ನೆನಪಿನಲ್ಲಿರುವಾಗಲೇ ಪಾಕ್ ಪ್ರಧಾನಿ ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನದ ಹಣಕಾಸು ಸಂಕಷ್ಟ ಬೆಟ್ಟದಷ್ಟು ಮಿತಿಮೀರಿದ್ದು, ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ. ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕುವುದು ಎಂದೂ ಜಮಾಯತ್ ಮುಖ್ಯಸ್ಥ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಆರ್ಥಿಕ ಸಂಕಷ್ಟ ಜಗಜ್ಜಾಹೀರಾಗಿದ್ದರೂ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಲಿಗೆ ಮಾತ್ರ ಆರ್ಥಿಕತೆ ಅದ್ಭುತವಾಗಿದೆಯಂತೆ ಎಂದು ಲೇವಡಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ದುಸ್ಥಿತಿ ಹೇರಳವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಈಗಾಗಲೇ ಎರಡು ಮಿನಿ ಬಜೆಟ್ ಗಳನ್ನು ಮಂಡಿಸಲಾಗಿದೆ. ದೇಶದ ವ್ಯಾಪಾರ ಕೊರತೆ ತಾಳತಪ್ಪಿದೆ. ಹಣದುಬ್ಬರ ಹೆಚ್ಚುತ್ತಲೇ ಇದೆ. ಇದನ್ನೆಲ್ಲಾ ಸರಿದೂಗಿಸಲು ಶತಕೋಟಿ ಡಾಲರ್ ಸಾಲ ಎತ್ತುವಳಿ ಯೋಜನೆ ಮೂಲಕ ತಾನು ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಪಾಕ್ ಪ್ರಧಾನಿ ಸಾಬೀತು ಮಾಡುತ್ತಿದ್ದಾರೆ.
ಪಾಕಿಸ್ತಾನ ಆರ್ಥಿಕತೆ ಸುಸ್ಥಿಗೆ ತರಲು ಹಿಂದಿನ ಸರ್ಕಾರದಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ತಾನು ಆರ್ಥಿಕತೆಯ ಚಾಂಪಿಯನ್ ಎಂದು ಬಡಾಯಿ ಕೊಚ್ಚಿಕೊಂಡು ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಗೂ ಸಹ ಏನೂ ಮಾಡಲು ಆಗಲಿಲ್ಲ ಎಂದು ಆರೋಪಿಸಿದ್ದಾರೆ.
PublicNext
17/01/2022 12:25 pm