ಕರಾಚಿ: ಪಾಕಿಸ್ತಾನದ ನಟ ಅದ್ನಾನ್ ಸಿದ್ದಿಕಿಯ ಸೆಲ್ಫಿ ಪೋಟೋ ಒಂದು ಈಗ ವೈರಲ್ ಆಗಿದೆ. ಈ ಫೋಟೋದಲ್ಲಿ ಒಂದು ವಿಶೇಷವೂ ಇದೆ. ಹಾಗಾಗಿಯೇ ಈ ಸೆಲ್ಫಿ ಫೋಟೋ ವೈರಲ್ ಆಗಿದೆ.
ಕರಾಚಿಯ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿರೋ ಮಾದಕ ವಸ್ತುಗಳಿಗೆ ಬೆಂಕಿ ಇಟ್ಟು ನಾಶ ಮಾಡಿದರು. ಅದೇ ಸಮಯದಲ್ಲಿಯೇ ಅಲ್ಲಿ ನಟ ಅದ್ನಾನ್ ಸಿದ್ದಕಿ ಕೂಡ ಆಗಮಿಸಿದ್ದರು. ಆಗಲೇ ಅದ್ನಾನ್ ತಮ್ಮ ಹಿಂದೆ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಳ್ಳುವಂತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಇಷ್ಟೇ ಆಗಿದ್ದರೇ ಸರಿ ಇರುತ್ತಿತ್ತೋ ಏನೋ.ಆದರೆ ಅದ್ನಾನ್ ಆ ಫೋಟೊವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಿಂದಲೇ ಅದ್ನಾನ್ ಈಗ ಕಾಮಿಡಿ ಪೀಸ್ ಆಗಿದ್ದಾರೆ. ಎಲ್ಲೆಡೆ ವೈರಲ್ ಕೂಡ ಆಗುತ್ತಿದ್ದಾರೆ.ಟ್ರೋಲ್ ಕೂಡ ಆಗ್ತಾಯಿದ್ದಾರೆ.
PublicNext
06/01/2022 03:40 pm