ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರಿಯಾದಲ್ಲಿ ನಾಗರಿಕ ಯುದ್ಧ - ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಪಲಾಯನ

ಡೆಮಾಸ್ಕಸ್ : ಸರಕಾರದ ದುರಾಡಳಿತದ ವಿರುದ್ಧ ರೊಚ್ಚಿಗೆದ್ದ ಸಿರಿಯಾ ಬಂಡುಕೋರರು ಹೋರಾಟದಿಂದ ನಾಗರಿಕ ಯುದ್ಧವೇ ನಡೆದು ಹೋಗಿದೆ. ದಾಳಿಗೆ ಬೆಚ್ಚಿದ ಸಿರಿಯಾ ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಪಲಾಯನಗೈದಿದ್ದಾರೆ. ಅಸ್ಸಾದ್ ವಿರುದ್ಧ ಬಂಡಾಯ ಸಾರಿದ್ದ ಬಂಡುಕೋರರು ಒಂದೊಂದೇ ನಗರವನ್ನು ವಶಕ್ಕೆ ಪಡೆದುಕೊಳ್ಳುತ್ತಾ ರಾಜಧಾನಿ ಡೆಮಾಸ್ಕಸ್ ಮೇಲೆಯೂ ದಾಳಿ ಮಾಡಿದ್ದಾರೆ. ಇದಾದ ನಂತರ ಅಸ್ಸಾದ್ ದೇಶ ಬಿಟ್ಟು ಓಡಿ ಹೋಗಿದ್ದಾರೆ.

ಕಳೆದ 24 ವರ್ಷಗಳಿಂದ ಸಿರಿಯಾದಲ್ಲಿ ಬಶಾರ್ ಅಲ್ ಅಸ್ಸಾದ್ ಅವರ ಸರ್ಕಾರವಿತ್ತು. 24 ವರ್ಷದ ಸುದೀರ್ಘ ಅಧಿಕಾರ ಇಂದಿಗೆ ಸಿರಿಯಾದಲ್ಲಿ ಕೊನೆಗೊಂಡಿದೆ. ದಿ ಹಯ್ಯಾತ್ ತೆಹ್ರಿರ್ ಅಲ್ ಶಮ್​ ಎಂಬ ಬಂಡಾಯಗಾರರ ಗುಂಪು ಸಿರಿಯಾದಲ್ಲಿ ನಾಗರೀಕ ಯುದ್ಧವನ್ನು ಸಾರಿತ್ತು. ಸದ್ಯ ನಡೆದಿರುವ ಬೆಳವಣಿಗೆ ಬಗ್ಗೆ ಮಾತನಾಡಿರುವ ಈ ಬಂಡಾಯ ಪಡೆ 8.12.2024ರ ದಿನವನ್ನು ನಾವು ಕರಾಳ ದಿನಗಳ ಯುಗಾಂತ್ಯವೆಂದು ಘೋಷಿಸುತ್ತೇವೆ ಎಂದಿದೆ.

ಈ ಒಂದು ಬೆಳವಣಿಗೆಯಿಂದ ಹೆಚ್ಚು ಕಡಿಮೆ ಅಲ್​ ಅಸ್ಸಾದ್​​ನ ಸರ್ಕಾರ ಸದಾಕಾಲಕ್ಕೆ ಕುಸಿದು ಬಿದ್ದಂತಾಗಿದೆ ಎಂದು ಅಂತಾರಾಷ್ಟ್ರೀಯ ಪತ್ರಿಕೆಗಳು ಹೇಳುತ್ತಿವೆ. ಈಗಾಗಲೇ ಡೆಮಾಸ್ಕಸ್​ ಏರ್​​ಪೋರ್ಟ್​ನಿಂದ ಮಿಲಿಟರಿ ಪಡೆ ಹಾಗೂ ರಕ್ಷಣಾ ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ. ಡೆಮಾಸ್ಕಸ್​ನಲ್ಲಿ ಯುದ್ಧದ ಟ್ಯಾಂಕ್ ಏರಿ ಗನ್​ಫೈರ್ ಮಾಡಿದ ಬಂಡಾಯ ಪಡೆಗಳು ವಿಜಯೋತ್ಸಾಹ ಆಚರಿಸುತ್ತಿವೆ.

Edited By : Nagaraj Tulugeri
PublicNext

PublicNext

09/12/2024 09:16 am

Cinque Terre

66.55 K

Cinque Terre

4

ಸಂಬಂಧಿತ ಸುದ್ದಿ