ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆನಡಾದಲ್ಲಿ ಭಾರತೀಯ ಮೂಲದ ಅನಿತಾ ಆನಂದ್ ಗೆ ರಕ್ಷಣಾ ಖಾತೆ

ಒಟ್ಟಾವಾ: ಕೆನಡಾ ದೇಶದಲ್ಲಿ ಭಾರತೀಯ ಮಹಿಳೆ ರಕ್ಷಣಾ ಸಚಿವೆಯಾಗಿದ್ದಾರೆ. ಇದು ಸುಳ್ಳಲ್ಲ..ನಿಜವಾದ ಸುದ್ದಿನೇ. ಅನಿತಾ ಆನಂದ್ ಅವರೇ ಈಗ ಕೆನಡಾ ದೇಶದ ರಕ್ಷಣಾ ಸಚಿವೆ ಆಗಿದ್ದಾರೆ. ಈ ಮೂಲಕ ಪರ ದೇಶದಲ್ಲಿ ಭಾರತೀಯ ಮಹಿಳೆ ರಕ್ಷಣಾ ಸಚಿವೆ ಆಗಿರೋದು ವಿಶೇಷ. ಬನ್ನಿ, ಹೇಳ್ತೀವಿ ಇನ್ನಷ್ಟು ವಿಷಯಗಳನ್ನ.

ಪ್ರಧಾನಿ ಜೆಸ್ಟಿನ್ ಟ್ರುಡೋ ಸಂಪುಟ ಪುನಾರಚಣೆ ಮಾಡಿದ್ದಾರೆ. ಆ ಕಾರಣಕ್ಕೇನೆ ಭಾರತ ಮೂಲದ ಅನಿತಾ ಆನಂದ್ ಅವರಿಗೆ ರಕ್ಷಣಾ ಸಚಿವೆ ಆಗಲು ಸಾಧ್ಯವಾಗಿದೆ. ಅನಿತಾ ಆನಂದ್ ಈ ಹಿಂದೆ ಕೆನಡಾ ದೇಶಕ್ಕೆ ಲಸಿಕೆ ತರೋ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನ ಅಷ್ಟೇ ಸಮರ್ಥವಾಗಿಯೇ ನಿಭಾಯಿಸಿ ಜನರ ಮೆಚ್ಚುಗೇನು ಗಳಿಸಿದ್ದಾರೆ. ಆ ಒಂದು ಹಿನ್ನೆಲೆಯಲ್ಲಿಯೇ ಅನಿತಾ ಆನಂದ್ ಈಗ ಕೆನಡಾದ ರಕ್ಷಣಾ ಸಚಿವೆ ಆಗಿದ್ದಾರೆ. ಈ ಒಂದು ಜವಾಬ್ದಾರಿಯನ್ನ ಅನಿತಾ ಆನಂದ್ ಸಮರ್ಥವಾಗಿಯೇ ನಿಭಾಯಿಸುತ್ತಾರೆ ಅಂತಲೇ ಇಲ್ಲಿಯ ಖಾಸಗಿ ವಾಹಿನಿ ಹೇಳಿದೆ.

Edited By :
PublicNext

PublicNext

27/10/2021 12:43 pm

Cinque Terre

28.63 K

Cinque Terre

0