ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳದ್ದೇ ಆಟ. ಇವರ ವಿಕೃತ ಕಾನೂನುಗಳು ಜನರನ್ನು ಭಯಭೀತಗೊಳಿಸುವ ಜೊತೆಗೆ ಕಿರುಕುಳವನ್ನು ನೀಡುತ್ತಿವೆ. ಸದ್ಯ ತಾಲಿಬಾನಿಗಳು ಪುರುಷರ ಕೆಲವೊಂದು ಕ್ಷೌರದ ಮೇಲೂ ನಿಷೇಧ ಹೇರಿರುವುದಾಗಿ ಘೋಷಿಸಿದೆ. ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಪುರುಷರು ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್ ಮಾಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಸ್ಲಾಮಿಕ್ ಓರಿಯಂಟೇಶನ್ ಸಚಿವಾಲಯದ ಅಧಿಕಾರಿಗಳು, ಪ್ರಾಂತೀಯ ರಾಜಧಾನಿ ಲಷ್ಕರ್ ಗಾಹ್ ನಲ್ಲಿರುವ ಪುರುಷರ ಸಲೊನ್ ಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ, ಸ್ಟೈಲಿಷ್ ಕೇಶ ವಿನ್ಯಾಸ, ಸಂಪೂರ್ಣ ದಾಡಿ ತಗೆಯುವುದು ಹಾಗೂ ಟ್ರಿಮ್ ಮಾಡಬಾರದು ಎಂದು ಸೂಚಿಸಿದೆ.
ಕ್ಷೌರದ ಅಂಗಡಿಗಳಲ್ಲಿ ಜನಪ್ರಿಯ ಸಂಗೀತ ಇಲ್ಲವೇ ಶ್ಲೋಕಗಳನ್ನು ಬಳಸಬಾರದು ಎಂದು ಆದೇಶಿಸಿದೆ. ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ ಅನುಸರಿಸುತ್ತಿರುವ ದಮನಕಾರಿ ಕಾನೂನು ನೋಡಿದರೆ ಮತ್ತೆ ಹಳೆಯ ನೀತಿಗಳಿಗೆ ಮರಳುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದೆಡೆ, ನಾವು ಬದಲಾಗಿದ್ದೇವೆ ಎಂದು ಹೇಳುತ್ತಲೇ ತಮ್ಮ ಹಳೆಯ ಧೋರಣೆಯನ್ನು ಪಾಲಿಸುತ್ತಾ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಂದುವರೆಸಿದೆ.
PublicNext
28/09/2021 04:22 pm