ನ್ಯೂಯಾರ್ಕ್: ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಶ್ವಾನವೊಂದು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೀಸ್ ವಿಶ್ವ ದಾಖಲೆ ಪುಸ್ತಕ ಸೇರಿದೆ.
ಮೂರು ವರ್ಷದ ಶ್ವಾನ ಲೌ, ಪೈಗ್ ಒಸ್ಲೆನ್ ಎಂಬ ಪಶುತಜ್ಞೆ ಬಳಿ ಇದೆ. ಇದರ ಕಿವಿ 13.38 ಇಂಚುಗಳಷ್ಟು ಉದ್ದವಿದೆ. ಜೀವಂತ ಇರುವ ನಾಯಿಗಳ ಪೈಕಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ಶ್ವಾನ ಎಂಬ ದಾಖಲೆ ಲೌನದ್ದಾಗಿದೆ.
ಈ ಬಗ್ಗೆ ಮಾತನಾಡಿರುವ ಶ್ವಾನದ ಮಾಲೀಕರಾದ ಪೈಗೆ ಒಸ್ಲೆನ್, "ಶ್ವಾನ ಲೌ ಕಿವಿಗಳು ಉದ್ದ ಇವೆ ಎಂದು ಗೊತ್ತಿದ್ದರೂ ಅವನ್ನು ಅಳೆದು ನೋಡುವ ಕುತೂಹಲವೇನೂ ಇರಲಿಲ್ಲ. ಆದರೆ ಕೊರೊನಾದ ವೇಳೆ ಈ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಮೂಡಿತು. ಆಗ ಅಳೆಯುವ ಕೆಲಸ ಮಾಡಿದೆ. ನನ್ನ ನೆಚ್ಚಿನ ಶ್ವಾನಕ್ಕೆ ಈ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ" ಎಂದು ಹೇಳಿದ್ದಾರೆ.
PublicNext
27/09/2021 03:22 pm