ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರ ವರ್ತನೆ, ಕಾನೂನು, ಶಿಕ್ಷೆಗಳು ದೇಶದ ಪ್ರಜೆಗಳನ್ನು ಬೆಚ್ಚಿ ಬೀಳುವಂತೆ ಮಾಡುತ್ತಿವೆ.
ಹೌದು. ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ ತಾಲಿಬಾನಿಗಳು ಶನಿವಾರ ಪ್ರಕರಣವೊಂದರ ಆರೋಪಿಗಳಿಗೆ ನೀಡಿದ ಕ್ರೂರ ಶಿಕ್ಷೆಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ನಾಲ್ಕು ಜನರಿಗೆ ಗುಂಡಿಕ್ಕಿ ಕೊಂದ ತಾಲಿಬಾನಿ ಪೊಲೀಸರು, ಓರ್ವನ ಶವವನ್ನು ಕ್ರೇನ್‌ಗೆ ಕಟ್ಟಿ ನಗರದ ಹೃದಯಭಾಗದಲ್ಲಿ ನೇತು ಹಾಕಿದ್ದಾರೆ. ಸುಮಾರು ನಾಲ್ಕೈದು ಗಂಟೆ ಶವ ನೇತಾಡುತ್ತಿತ್ತು ಎಂದು ವರದಿಯಾಗಿದೆ.
ಅಪಹರಣಕಾರರಿಗೆ ಪಾಠ ಕಲಿಸಲು ತಾಲಿಬಾನ್ ಈ ಶಿಕ್ಷೆ ನೀಡಿದೆ. ಈ ಮೂಲಕ ಅಪಹರಣಕ್ಕೆ ಬ್ರೇಕ್ ಬೀಳಲಿದೆ ಎಂದು ಹೆರಾತ್ ಪ್ರಾಂತ್ಯದ ಉಪ ಗವರ್ನರ್ ಮೌಲ್ವಿ ಶಿರ್ ಅಹ್ಮದ್ ಮುಹಾಜಿರ್, ತಮ್ಮ ಕ್ರೌರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹೆರಾತ್ ನಗರದ ನಿವಾಸಿ ವಜೀರ್ ಅಹಮದ್ ಸಿದ್ಧಿಕಿ, "ತಾಲಿಬಾನಿ ಪೊಲೀಸರು ನಾಲ್ಕು ಶವಗಳನ್ನು ಅಡ್ಡದಾರಿಯಿಂದ ಎಳೆದು ತಂದರು. ಒಂದು ಶವವನ್ನು ಕ್ರೇನ್‌ಗೆ ಕಟ್ಟಿ ತೂಗು ಹಾಕಿದರು. ಇನ್ನುಳಿದ ಮೂರು ಶವಗಳನ್ನು ನಗರದ ಮತ್ತೊಂದು ಭಾಗಕ್ಕೆ ತೆಗೆದುಕೊಂಡು ಹೋಗಲಾಯ್ತು. ಶವದ ಮೇಲೆ ಕೆಲ ಬರಹವುಳ್ಳ ಭಿತ್ತಿ ಪತ್ರ ಅಂಟಿಸಲಾಗಿತ್ತು" ಎಂದು ಘಟನೆಯನ್ನು ವಿವರಿಸಿದ್ದಾರೆ.
PublicNext
26/09/2021 12:59 pm